ಸುದ್ದಿ ಕನ್ನಡ ವಾರ್ತೆ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು .
ಪ್ರಾಂಶುಪಾಲರಾದ ಎಂ. ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಅಂಬೇಡ್ಕರ್ ಅವರ ಸಂವಿಧಾನ ಜಾರಿಗೆ ತರುವ ಮೂಲಕ ದೇಶದ ಐಕ್ಯತೆಗೆ ದೇಶದ ಅಭಿವೃದ್ಧಿ ಪಥದಲ್ಲಿದೆ ಈ ದಿನವು ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ನಮ್ಮ ಮಹಾನ್ ನಾಯಕರ ದೂರದೃಷ್ಟಿಯನ್ನು ನೆನಪಿಸುತ್ತದೆ .
ನಾವು ಯಾವಾಗಲೂ ಏಕತೆ, ಸಮಾನತೆ ಮತ್ತು ನಮ್ಮ ರಾಷ್ಟ್ರದ ಗೌರವದ ಮೌಲ್ಯಗಳನ್ನು ಅನುಸರಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ,ಭಾರತದ ಪ್ರಗತಿಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡೋಣ ಎಂದು ತಿಳಿಸಿ ಗಣರಾಜ್ಯೋತ್ಸವದ ಶುಭಾಶಯಗಳನು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎಂ. ಕುಮಾರಸ್ವಾಮಿ, ಉಪ ಪ್ರಾಂಶುಪಾಲರಾದ ಎಂ.ಜ್ಞಾನೇಂದ್ರ ಸ್ವಾಮಿ , ವಸತಿಶಾಲೆಯಶಿಕ್ಷಕರುಗಳಾದ ದೈಹಿಕ ಶಿಕ್ಷಕ ರಾಜಶೇಖರ್, ಉಮೇಶ್, ಸಿದ್ಧಮುತ್ತು, ಚಿನ್ನಮುತ್ತು, ರಿತೇಶ್, ಸುಜಾತ, ಕಂಪ್ಯೂಟರ್ ಆಪರೇಟರ್ ಸುನಿಲ್ ಕುಮಾರ್, ನಿಲಯಪಾಲಕ ತ್ಯಾಗರಾಜ್, ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯದ ಸಿಬ್ಬಂದಿಗಳು ವಸತಿ ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಜರಿದ್ದರು..
ವರದಿ.
ಎಸ್. ಪುಟ್ಟಸ್ವಾಮಿಹೊನ್ನೂರು
ಚಾಮರಾಜನಗರ ಜಿಲ್ಲೆ
