ಸುದ್ದಿ ಕನ್ನಡ ವಾರ್ತೆ

ಜೋಯಿಡಾ :. ದೇಶದ ಅಬ್ಯುದಯಕ್ಕಾಗಿ ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ, ಸಂವಿದಾನ ನಮಗೆ ನೀಡಿದ ಹಕ್ಕನ್ನು ಅನುಭವಿಸುವಂತೆ ಕರ್ತವ್ಯವನ್ನು ಪಾಲಿಸುವ ಮೂಲಕ ಜಗತ್ತಿನ ಶ್ರೇಷ್ಠ ಪ್ರಜಾಪ್ರಭುತ್ವ ನಮ್ಮ ದೇಶದ ಪ್ರಜಾ ಸತ್ತಾತ್ಮಕತೆ ಯನ್ನು ಗೌರವಿಸೋಣ ಎಂದು ಜೋಯಿಡಾ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ ಹೇಳಿದರು.

ಅವರು ಜೋಯಿಡಾ ಆಡಳಿತ ಸೌಧದಲ್ಲಿ ನಡೆದ ಗಣರಾಜ್ಯೋತ್ಸವದ ದ್ವಜಾರೋಹಣ ನೆರವೇರಿಸಿ ತಾಲೂಕಿನ ಜನತೆಗೆ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಗ್ರಾ. ಪಂ. ಅಧ್ಯಕ್ಷೆ ಚಂದ್ರಿಮಾ ಮಿರಾಶಿ,ತಾಲೂಕು ಪಂಚಾಯತ ಅಧಿಕಾರಿ ಭಾರತಿ ಏನ್, ಉಪಾದ್ಯಕ್ಷ ಸಂತೋಷ ಮಂತೇರೋ, ನಾಗರಿಕ ಪ್ರಮುಖರಾದ ಕೆ. ಪಿ. ಸಿಸಿ. ಸದಸ್ಯ ಸದಾನಂದ ದಬಗಾರ, ಮರಾಠಾ ಸಮಾಜದ ಅಧ್ಯಕ್ಷ ಚಂದ್ರಕಾಂತ ದೇಸಾಯಿ, ಜೆ. ಡಿ. ಎಸ್. ತಾಲೂಕಾ ಅಧ್ಯಕ್ಷ ಅಜೀತ ಥೋರವತ್, ಭವಾನಿ ಚವ್ಹಾಣ, ತಾಲೂಕಿನ ಆಧಿಕಾರಿಗಳಾದ ಸುಜಾತಾ ಉಕ್ಕಲಿ, ಎಸ್ ಬಸವರಾಜ, ಸಿ. ಡಿ. ಪಿ. ಓ. ಸಿದ್ದಲಿಂಗಪ್ಪ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಶಾಲಾ ಕಾಲೇಜು ಹಾಗೂ ಸಾರ್ವಜನಿಕರಿಗಾಗಿ ನಡೆಸಿದ ವಿವಿದ ಸ್ಪರ್ಧೆಯಲ್ಲಿ ವಿಜೇತರಿಗೆ ಭಹುಮಾನ ವಿತರಿಸಲಾಯಿತು.
ಎಸ್. ಎಸ್. ಎಲ್.ಸಿ. ಯಲ್ಲಿ ತಾಲೂಕಿಗೆ ಪ್ರಥಮ ದ್ವಿತೀಯ, ತೃತೀಯ ಬಂದ ಮೂರು
ವಿದ್ಯಾರ್ಥಿಗಳಿಗೆ ಸರಕಾರ ಕೊಡಮಾಡಿದ ಶೈಕ್ಷಣಿತ ಉತ್ತೇಜನಕರ ಭಹುಮಾನ ರೂಪದಲ್ಲಿ ಲೆಪಟೋಪ ಬದಲಿಗೆ ರೂ. 50 000 ಸಾವಿರ ನೀಡಿ ತಾಲೂಕಾ ಆಡಳಿತದಿಂದ ಗೌರವಿಸ ಲಾಯಿತು.

ವೇದಿಕೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ, ನೃತ್ಯ ಪ್ರದರ್ಶನ ಅದ್ಭುತವಾಗಿ ನಡೆಯಿತುಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು