ಸುದ್ದಿ ಕನ್ನಡ ವಾರ್ತೆ

ಚಾಮರಾಜನಗರದ ರಾಮಸಮುದ್ರ ಬಸ್ ನಿಲ್ದಾಣದಲ್ಲಿ ನೂತನವಾಗಿ ಆರಂಭವಾದ ಜಯಚಾಮರಾಜ ಇವಿ ಮೋಟಾರ್ ಶೋರೂಂ ನ್ನು ಎಂಎಸ್‌ಐಎಲ್ ಅಧ್ಯಕ್ಷರು ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿ ಮಾತನಾಡಿ ನಮ್ಮ
ಚಾಮರಾಜನಗರ ಬೆಳೆಯುತ್ತಿರುವ ನಗರವಾಗಿದ್ದು, ಇಂತಹ ಅನೇಕ ಮಾರಾಟ ಮಳಿಗೆಗಳು ಅಗತ್ಯವಾಗಿದ್ದು, ವ್ಯಾಪಾರ, ವಹಿವಾಟು ಚೆನ್ನಾಗಿ ನಡೆದರೆ ಮಾತ್ರ ನಗರ ಬೆಳೆಯಲು, ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳು ಕಾರ್ಯನಿರ್ವಹಿಸುತಿದ್ದು ಅನೇಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ವ್ಯಾಪಾರ, ವಹಿವಾಟು ನಗರಪ್ರದೇಶ ಅಭಿವೃದ್ಧಿ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಎಲೆಕ್ನಿಕಲ್ ವಾಹನಗಳಿಂದ ಪರಿಸರ ಮಾಲಿನ್ಯ ತಡೆಯಬಹುದು. ಮೂಲಕ ದೇಶದ ಅಭಿವೃದ್ಧಿಗೆ ಬಳಬಹುದು ಎಂದು ತಿಳಿಸಿ ಶುಭ ಕೋರಿದರು.

ಶ್ರೀ ಸಿದ್ಧಮಲ್ಲೇಶ್ವರ ವಿರಕ್ತಮಠದ ಚನ್ನಬಸವಸ್ವಾಮೀಜಿ, ದಲಿತ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ(ಪಾಪ)
ನಗರಸಭಾ ಮಾಜಿ ಅಧ್ಯಕ್ಷೆ ಚಿನ್ನಮ್ಮ,
ಉದ್ಯಮಿ ಶ್ರೀನಿಧಿಕುದರ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಶುಭ ಕೋರಿದರು.
ಈ ಕಾರ್ಯಕ್ರಮದಲ್ಲಿ ಇವಿ ಮೋಟಾರ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ಕುಮಾ‌ರ್, ನ್ಯಾಷನಲ್ ಪ್ರಮೋಟರ್ ಸಿದ್ದೇಗೌಡ, ಸೌತ್ ಇಂಡಿಯನ್ ಪ್ರಮೋಟರ್ ವಸಂತ್, ಜಯ ಚಾಮರಾಜ ಇವಿ ಶೋರೂಂ ಮಾಲೀಕ ಸುರೇಶ್‌ಗೌಡ, ಸಿದ್ದ ಮಲ್ಲೇಶ್ವರ ವಿರಕ್ತಮಠದ ಚನ್ನಬಸವೇಶ್ವರ ಸ್ವಾಮಿ,ಕಂಪನಿಯ ಪ್ರಶಾಂತ್, ಘಟಂ ಕೃಷ್ಣ, ದಾನೇಶ್ವರಿ ಜೀ, ಶ್ರೀನಿವಾಸ್, ಕೇಂದ್ರ ಬರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ,ಅಂತರಾಷ್ಟ್ರೀಯ ಕ್ರಿಕೆಟ್ ಕೋಚರ್ ರಾಘವೇಂದ್ರ ಪ್ರತಾಪ್ ಸಿಂಗ್, ಕಲಾವಿದ ಹೆಚ್.ಎಂ.ಶಿವಣ್ಣ ಮಂಗಲಹೊಸೂರು ಚಲನಚಿತ್ರ ನಟರಾದ ಸ್ಮೈಲ್ ಶಿವು,ಜೆಡಿಎಸ್ ಮುಖಂಡ ಆಲೂರು ಮಲ್ಲು, ಕರವೇ ತಾಲೂಕು ಅಧ್ಯಕ್ಷ ಸತೀಶ್ , ಉಪಾಧ್ಯಕ್ಷ ಸುಂದರ್, ನಿವೃತ್ತ ಶಿಕ್ಷಕ ಜೋಸೆಫ್.ಎನ್, ಶಿವಣ್ಣ, ವಸಂತ ಬಂಗಾರು,ಉಮ್ಮತ್ತೂರು ಬಸವರಾಜು ಇತರರು ಹಾಜರಿದ್ದರು. ವರದಿ ಎಸ್.ಪುಟ್ಟಸ್ವಾಮಿಹೊನ್ನೂರು ಚಾಮರಾಜನಗರ ಜಿಲ್ಲೆ