ಸುದ್ದಿ ಕನ್ನಡ ವಾರ್ತೆ
ತಾಲೂಕಿನಲ್ಲಿ ಮಾವಿನ ಗಿಡಗಳು ಹೂವಿನಿಂದ ತುಂಬಿ ಕಂಗೊಳಿಸುತ್ತಿವೆ. ಮೊದ ಮೊದಲು ಮಾವಿನ ಗಿಡದಲ್ಲಿ ಅಲ್ಲೊಂದು ಇಲ್ಲೊಂದು ಹೂವುಗಳು ಕಂಡು ಬಂದವು ಆಗ ಜನರು ಈ ವರ್ಷ ಮಾವಿನ ಕಾಯಿ ಕಡಿಮೆ ಬರುತ್ತದೆ ಈ ವರ್ಷದ ಮಿಡಿ ಉಪ್ಪಿನಕಾಯಿ, ಉಪ್ಪಿನಕಾಯಿ ಗಳಿಗೆ ಏನು ಮಾಡೋಣ ಎಂಬ ಚಿಂತೆಯಲ್ಲಿ ಇದ್ದರು, ಆದರೆ ದಿನ ಕಳೆದಂತೆ ಮಾವಿನ ಗಿಡದ ತುಂಬೆಲ್ಲ ಹೂವೇ ಹೂವುಗಳು ತುಂಬಿ ಗಿಡ ಗಳು ಕಂಗೊಳಿಸುತ್ತಿವೆ, ಹೂಬಿಟ್ಟ ಗಿಡಗಳಲ್ಲಿ ಅರ್ಧ ದಷ್ಟಾದರೂ, ತುಂಬಾ ಆದಂತೆ ಎಂದು ಜನರು ಖುಷಿ ಪಡುತ್ತಿದ್ದಾರೆ, ಈಗ ಮಾವಿನ ಹೂ ವಿಲ್ಲದ ಗಿಡವೇ ಇಲ್ಲ ಎಂಬಷ್ಟು ಎಲ್ಲ ಗಿಡ ಗಳಲ್ಲೂ ಹೂವುಗಳು ತುಂಬಿಕೊಂಡಿವೆ. .
ತಾಲೂಕಿನಲ್ಲಿ ಒಳ್ಳೆ ಒಳ್ಳೆ ಜಾತಿಯ ಹಳೇ ಅಪ್ಪೆ ಮಿಡಿ ಮರಗಳಿವೆ ಗ್ರಾಮೀಣ ಜನರಿಗೆ ಇದು ಗೊತ್ತಿದೆ ಇಂತ ಮರಗಳ ರಕ್ಷಣೆ ಆಗಬೇಕಾಗಿದೆ. ಸದ್ಯದ ಕೆಲವು ವರ್ಷ ಗಳಿಂದ ಮಾವಿನ ಮಿಡಿ ಗಳನ್ನು ತಂದು ಮಾರುವವರು ಅಲ್ಲಲ್ಲಿ ಕಾಣ ಸಿಗುತ್ತಾರೆ, ಕೆಲವರು ಮಿಡಿಗಳನ್ನು ಕೊಯ್ದು ಹೊರಗಡೆ ಕೂಡ ಮಾರುತ್ತಾರೆ, ಇದರಿಂದ ಇಲ್ಲದವರಿಗೆ ಮಾವಿನ ಮಿಡಿ ಕಾಯಿಗಳು ಸಿಗುತ್ತವೆ, ಈ ತಾಲೂಕಿನಲ್ಲಿ ಮಿಡಿಗಳು ಸಿಗದೇ ಕೆಲವರು ಬೇರೆ ತಾಲೂಕಿನಿಂದ ಮಾವಿನ ಮಿಡಿ ತರಲು ಹೋದಾಗ ಅವರಿಗೆ ಜೋಯಿಡಾ ದ ಉತ್ತಮ ಮಾವಿನ ಮಿಡಿ ಗಳು ಸಿಕ್ಕು ಅದನ್ನು ತಂದ ಉದಾಹರಣೆ ಗಳಿವೆ, ಇಲ್ಲಿನ ಹಳೆಯ ಅಪ್ಪೆ ಮಿಡಿಗಳು ಬೇರೆಲ್ಲೂ ಸಿಗಲಾರವು, ಡಿಗ್ಗಿಯಂತ ಪ್ರದೇಶದಲ್ಲಿ ಸಿಗುವ ಮಾವಿನ ಅಪ್ಪೆ ಮಿಡಿಗೆ ಹಿಂದಿನ ಜಿಲ್ಲಾಧಿಕಾರಿ ಗಳೇ ಮನಸೊತಿದ್ದರು. ಅಂತ ಮಿಡಿ ಮಾವಿನ ಮರಗಳ ಸಂರಕ್ಷಣೆ ಎಲ್ಲರೂ ಮಾಡೋಣ, ಒಮ್ಮೆಯಾದರೂ ಡಿಗ್ಗಿ ಪ್ರದೇಶದ ಅಪ್ಪೆಮಿಡಿ (ಜಪ್ಪೆ ಮಿಡಿ )ರುಚಿ ಸವಿಯೋಣ.
