ಸುದ್ದಿ ಕನ್ನಡ ವಾರ್ತೆ
ಜಿಲ್ಲಾ ಪಂಚಾಯತ್ ಉತ್ತರಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜೊಯಿಡಾ, ಸಮೂಹ ಸಂಪನ್ಮೂಲ ಕೇಂದ್ರ ನಾಗೋಡಾ, ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಪಾರ ಕರವಾಡಾ ಇವರ ಸಂಯುಕ್ತ ಆಶ್ರಯದಲ್ಲಿ 2025 26 ನೇ ಸಾಲಿನ ನಾಗೋಡಾ ಕ್ಲಸ್ಟರ್ ಮಟ್ಟದ ಎಫ್ಎಲ್ ಎನ್ ಕಲಿಕಾ ಹಬ್ಬ 24 ಜನವರಿ 2026ರಂದು ಶನಿವಾರ ಅದ್ದೂರಿಯಾಗಿ ನಡೆಸಲಾಯಿತು.
ಶ್ರೀ ಮಹಾದೇವ ಹಳದಂಕರ ಇವರು ಬಂದಂತ ಎಲ್ಲಾ ಗಣ್ಯಮಾನ್ಯರನ್ನು ಸ್ವಾಗತ ಸ್ವಾಗತಿಸಿದರು.ವೇದಿಕೆಯಲ್ಲಿ ಗಣ್ಯ ಮಾನ್ಯರಿಗೆ ಹೂಗುಚ್ಚ ನೀಡುವುದರ ಮೂಲಕ ಸ್ವಾಗತ ಕೋರಲಾಯಿತು, ನಂತರ ಶಾಲಾ ಮಕ್ಕಳು ಪ್ರಾರ್ಥನೆ ,ಸ್ವಾಗತ ಗೀತೆಯನ್ನು ಶುಶ್ರಾವ್ಯವಾಗಿ ಹಾಡುವದವರ ಮೂಲಕ ಕಾರ್ಯಕ್ರಮಕ್ಕೆ ಎಲ್ಲರ ಮನ ಸೆಳೆದರು.
ಪ್ರಾಸ್ತಾವಿಕವಾಗಿ ಕ್ಲಸ್ಟರ್ ಸಿ, ಆರ್ ಪಿ ಗಳಾದ ಶ್ರೀ ಶಶಿಕಾಂತ ಹೂಲಿ ಇವರು ಮಾತನಾಡುತ್ತಾ ಎಫ್ಎಲ್ಎನ್ ನಿಧಾನಗತಿ ಕಲಿಕೆಯ ಮಕ್ಕಳಿಗಾಗಿ ರೂಪಿತವಾದ ಒಂದು ವಿಶೇಷ ಕಾರ್ಯಕ್ರಮ ಇದರಲ್ಲಿ ಪಾಲಕ ಪೋಷಕರು ಮಕ್ಕಳೊಂದಿಗೆ ಪಾಲ್ಗೊಳ್ಳುವ ಮೂಲಕ,ಹಾಗೂ ಜೂನ್ ನಿಂದ ಈ ಮಕ್ಕಳು ಗಳಿಸಲು ಕಷ್ಟಕರ ಎನಿಸುವ ಸಾಮರ್ಥ್ಯಗಳ ಗಳಿಕೆಗಳ ಹೊಸಬೆಳಕು ಇಂದು ಇಲ್ಲಿ ಬೆಳಗ ಲಿದ್ದು ಕಾರ್ಯಕ್ರಮದ ವಿಶೇಷತೆಗೆ ಹೊಸ ಮೆರಗು ನೀಡುವದು. ಈ ಅವಕಾಶ ಕಲಿಕಾ ಹಬ್ಬದಲ್ಲಿ ಮಾತ್ರ ಎಂದು ಹೇಳಿದರು.
ತದನಂತರ ನಾಗೋಡಾ ಪಂಚಾಯತ್ ಸದಸ್ಯರಾದ ಶ್ರೀ ದಿಗಂಬರ ದೇಸಾಯಿ, ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಶೀರ ಸರ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸಂದೀಪ ಮಿರಾಶಿ, ಶಿಕ್ಷಣ ಸಂಯೋಜಕರಾದ ಶ್ರೀ ಪರಮೇಶ್ವರ ಹರಿಕಂತ್ರ, ಸಿ ಆರ್ ಪಿಗಳಾದ ಶ್ರೀ ಭಾಸ್ಕರ ಗಾಂವಕರ ಶ್ರೀಮತಿ ಜ್ಯೋತಿ ಗುಡೆ ಶ್ರೀ ಶಶಿಕಾಂತ ಹೂಲಿ ಊರ ಮಿರಾಶಿಗಳು ಎಲ್ಲರೂ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದರು.
ಉದ್ಘಾಟಕರಾದ ಶ್ರೀ ದಿಗಂಬರ ದೇಸಾಯಿ ನಾಗೋಡಾ ಗ್ರಾಮ ಪಂಚಾಯತ್ ಸದಸ್ಯರು ಮಾತನಾಡುತ್ತಾ ,ಕಲಿಕಾ ಹಬ್ಬದಂತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮಕ್ಕಳು ಗಳಿಸಿದ ಸಾಮರ್ಥ್ಯ ಪ್ರದರ್ಶನ ಪಾಲಕರ ಒಳಗೊಳ್ಳುವಿಕೆ ಕಲಿಕೆಗೆ ಹೊಸ ಅರ್ಥವನ್ನು ನೀಡುತ್ತದೆ. ಶಿಕ್ಷಣ ಇಲಾಖೆಯ ಈ ಹೊಸ ವಿನೂತನ ಕಾರ್ಯಕ್ರಮ ಮಕ್ಕಳಲ್ಲಿ ಚಿಂತನಾಶೀಲತೆ, ಸ್ವಯಂಕಲಿಕೆಗೆ ,ಕೌಶಲ್ಯಾಭಿವೃದ್ಧಿಗೆ, ಚಿಂತನೆಗೆ ,ಅವಕಾಶ ಕಲ್ಪಿಸಿದೆ ಎಂದು ಮಾತನಾಡಿದರು .
. ಘನ ಅಧ್ಯಕ್ಷತೆ ವಹಿಸಿದ ಶ್ರೀ ಸಂದೀಪ ಮಿರಾಶಿ ಮರಾಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮ 27 ವರ್ಷಗಳ ನಂತರ ನಮ್ಮ ಶಾಲೆಯಲ್ಲಿ ನಡೆದ ಮೊದಲ ಕಾರ್ಯಕ್ರಮ,ಮಕ್ಕಳಿಗಾಗಿ ಒದಗಿದ ಸುವರ್ಣ ಅವಕಾಶವಿದು ಇದರ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳುವಂತೆ ತಿಳಿಸಿದರು.
. ಹಾಜರಾತಿಅಧಿಕಾರಿಗಳಾದ ಶ್ರೀ ಪರಮೇಶ್ವರ ಸರ್ ಮಾತನಾಡುತ್ತಾ ಇದು ವಿಶೇಷವಾಗಿ ಮೂಲಭೂತ ಸಾಕ್ಷರತೆ, ಹಾಗೂ ಸಂಖ್ಯಾ ಜ್ಞಾನ ಗಳ ಚಟುವಟಿಕೆಗಾಗಿ ರೂಪಿತವಾಗಿದ್ದು ಮಕ್ಕಳ ಕಲಿಕೆಯ ಸಮೃದ್ಧಿಗೆ ಪೂರಕವಾದ ಒಂದು ಕಾರ್ಯಕ್ರಮ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಬಶೀರ್ ಸರ್ ರವರು,ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ದಿಗಂಬರ ಸರ್ ಸ ಸಿ ಆರ್ ಪಿಗಳು ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಊರ ಮಿರಾಶಿಗಳುವಿತರಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಾಂತಕುಮಾರ ಶಿಕ್ಷಕರು ನಿರೂಪಣೆ ಮತ್ತು ವಂದನಾರ್ಪಣೆಯನ್ನು ಮಾಡಿದರು.ಒಟ್ಟಾರೆಯಾಗಿ ನಾಗೋಡ ಕ್ಲಸ್ಟರ್ ನ ಕಲಿಕಾ ಹಬ್ಬ ಯಶಸ್ವಿಯಾಗಿ ಮುಕ್ತಾಯವಾಯಿತು.
