ಸುದ್ಧಿಕನ್ನಡ ವಾರ್ತೆ
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಮೂಲದ ಹಾಗೂ ಪ್ರಸ್ತುತ ಗೋವಾದ ಮಾರ್ಶೆಲ್ ನಿವಾಸಿಯಾಗಿರುವ ಶ್ರೀಮತಿ ಸರಸ್ವತಿ ಹಾಗೂ ಶ್ರೀ ನಾರಾಯಣ ಭಟ್ ರವರ ದ್ವಿತೀಯ ಪುತ್ರ ಶ್ರೀ ಗಣೇಶ್ ರವರು ಫೆಬ್ರುವರಿ 22 ರಂದು ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರಸ್ತುತ ಲಂಡನ್ ನಲ್ಲಿ ಕಂಪನಿಯೊಂದರಲ್ಲಿ ಉನ್ನತ ಹುದ್ಧೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶ್ರೀ ಗಣೇಶ್ ಭಟ್ ರವರ ಕಿರುಪರಿಚಯ ಇಲ್ಲಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ದಿನಾಂಕ 05/08/1999 ರಂದು ಶ್ರೀಮತಿ ಸರಸ್ವತಿ ಮತ್ತು ಶ್ರೀ ನಾರಾಯಣ ಭಟ್ ರವರ ದ್ವಿತೀಯ ಪುತ್ರನಾಗಿ ಶ್ರೀ ಗಣೇಶ್ ಭಟ್ ಜನಿಸಿದರು. ಪೌರೋಹಿತ್ಯ ವೃತ್ತಿಯ ಹಿನ್ನೆಲೆಯಲ್ಲಿ ಶ್ರೀ ನಾರಾಯಣ ಭಟ್ ರವರು ಗೋವಾದ ಮಾರ್ಶೆಲ್ ನಲ್ಲಿ ಬಂದು ವಾಸ್ತವ್ಯ ಹೂಡಿದ ಹಿನ್ನೆಲೆಯಲ್ಲಿ ಪುತ್ರ ಗಣೇಶ ಭಟ್ ರವರ ಶಿಕ್ಷಣ ಗೋವಾದಲ್ಲಿ ಪೂರ್ಣಗೊಂಡಿತು.

ಶ್ರೀ ಗಣೇಶ ಭಟ್ ರವರು 1 ರಿಂದ 5 ನೇಯ ತರಗತಿಯ ವರೆಗೆ ಮಾರ್ಶೆಲ್ ನ ತಾರಿವಾಡಾದ ಸರ್ಕಾರಿ ಪ್ರಾಥನಿಕ ಶಾಲೆಯಲ್ಲಿ , 5 ರಿಂದ 10 ನೇಯ ತರಗತಿಯ ವರೆಗೆ ಶ್ರೀ ಶಾರದಾ ಇಂಗ್ಲೀಷ್ ಪ್ರೌಢಶಾಲೆ ಮಾರ್ಶೆಲ್ ನಲ್ಲಿ , ಪಿಯುಸಿ ಮತ್ತು ಪದವಿಪೂರ್ವ ಶಿಕ್ಷಣವನ್ನು ವಸಂತಾರಾ ದೆಂಪೊ ಹೈಯರ್ ಸೆಕೆಂಡರಿ ಯಲ್ಲಿ (2015-2017) ಪೂರ್ಣಗೊಳಿಸಿದರು. ನಂತರ 2017 ರಿಂದ 2021 ರ ವರೆಗೆ ಶ್ರೀ ವಿಶ್ವೇಶ್ವರಯ್ಯಾ ತಾಂತ್ರಿಕ ಮಹಾವಿದ್ಯಾಲಯ ಮಂಗಳೂರು, ಶ್ರೀದೇವಿ ಇನ್ಸ್ಟಿಟ್ಯೂಟ್ ವಿಶ್ವವಿದ್ಯಾಲಯ ಮಂಗಳೂರಿನಲ್ಲಿ ಏರೊನಾಟಿಕಲ್ ಎಂಜಿನೀಯರಿಂಗ್ ಪೂರ್ಣಗೊಳಿಸಿದರು. ನಂತರ ಉನ್ನತ ಶಿಕ್ಷಣಕ್ಕಾಗಿ ಏರೋಸ್ಪೇಸ್ ಇಂಜಿನಿಯರಿಂಗ್ ನ್ನು ಲೆಸ್ಮರ್ ವಿಶ್ವವಿದ್ಯಾಲಯ ಲಂಡನ್ (ಯುಕೆ),2003 ರಲ್ಲಿ ಎಂಎಸ್ ಸಿ ಮಾಸ್ಟರ್ ಡಿಗ್ರಿ ಮುಗಿಸಿ ನಂತರ ಲಂಡನ್ ನಲ್ಲಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿ (ಸದ್ಯ ಕೆಲಸ ನಿರ್ವಹಿಸುತ್ತಿರುವ ಸ್ಥಳ) ಕೆಲಸ ನಿರ್ವಹಿಸುತ್ತಿದ್ದಾರೆ.

ಸದ್ಯ ಶ್ರೀ ನಾರಾಯಣ ಭಟ್ ರವರು ಗೋವಾದ ಮಾರ್ಶೆಲ್ ನಲ್ಲಿ ಪುರೋಹಿತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀ ನಾರಾಯಣ ಭಟ್ ರವರ ಹಿರೀಯ ಮಗ ಮಹೇಶ ಭಟ್ ಹಾಗೂ ಸೊಸೆ ಡಾ|| ಪ್ರೀತಿ ಮಹೇಶ್ ಭಟ್ ರವರು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಹೇಶ್ ಭಟ್ ರವರು ಬೆಂಗಳೂರಿನಲ್ಲಿ ಕಿರುತೆರೆ ಧಾರವಾಹಿ ನಟನಾಗಿ ಹೆಸರು ಗಳಿಸಿದ್ದಾರೆ. ಮಹೇಶ್ ಭಟ್ ರವರ ಪತ್ನಿ ಡಾ|| ಪ್ರೀತಿ ಭಟ್ ರವರು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನಾರಾಯಣ ಭಟ್ ರವರ ದ್ವಿತೀಯ ಪುತ್ರ ಶ್ರೀ ಗಣೇಶ್ ಭಟ್ ರವರ ವಿವಾಹ ಸಮಾರಂಭವು ಶ್ರೀ ಶಂಕರನಾರಾಯಣ ಹಾಗೂ ಶ್ರೀಮತಿ ಉಷಾ ಶಂಕರನಾರಾಯಣ ರವರ ಪ್ರಥಮ ಪುತ್ರಿ ಶ್ರೇಯಾ ರವರೊಂದಿಗೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಕಾರ್ಮಿಕ ಭವನದಲ್ಲಿ ನಡೆಯಲಿದೆ.
ಇವರ ವಿವಾಹ ಸಮಾರಂಭಕ್ಕೆ ಗೋವಾ ಮಾರ್ಶೆಲ್ ತಾರಿವಾಡಾದ ಶ್ರೀ ಸಾಯಿಬಾಬಾ ಭಕ್ತವೃಂದ ಹಾಗೂ ಮಿತ್ರಮಂಡಳಿ ಶುಭಹಾರೈಸಿದೆ.