ಸುದ್ದಿ ಕನ್ನಡ ವಾರ್ತೆ
ಶಿರಸಿ: ಮೂಲತಃ ಕಾನಸೂರಿನ ವಿದುಷಿ ಶ್ವೇತಾ ಆರ್. ಭಟ್ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ‘ಐಬಿಆರ್ ಅಚೀವರ್ (IBR Achiev-er)’ ಎಂಬ ಗೌರವಾನ್ವಿತ ಬಿರುದು ಲಭಿಸಿದೆ.
ಶ್ವೇತಾ ಭಟ್ ಅವರು ಶ್ರವಣ ಮತ್ತು ಮಾತು ಅಸಮರ್ಥತೆಯಿರುವ ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿಗೆ ಭರತನಾಟ್ಯದ ಸಾಂಪ್ರದಾಯಿಕ ಏಕಾಂಗ ಪ್ರದರ್ಶನವಾದ ‘ರಂಗಪ್ರವೇಶ’ ಪ್ರಸ್ತುತಿ. ಮತ್ತು ಯಶಸ್ವಿಯಾಗಿ ತರಬೇತಿ ನೀಡಿದ ವಿಶಿಷ್ಟ ಸಾಧನೆಗಾಗಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ರಂಗಪ್ರವೇಶ ಕಾರ್ಯಕ್ರಮವು 2025ರ ನವೆಂಬರ್ 16ರಂದು ಚಿತ್ರದುರ್ಗದ ಜಿ.ಜಿ ಸಮುದಾಯ ಭವನದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಸಂಪಾದಕೀಯ ಮಂಡಳಿಯಿಂದ
ನಡೆಸಲಾದ ಸವಿಸ್ತಾರ ಪರಿಶೀಲನೆಯ ನಂತರ, ಈ ಸಾಧನೆಯನ್ನು 2025ರ ಡಿಸೆಂಬರ್ 10ರಂದು ಅಧಿಕೃತವಾಗಿ ದೃಢಪಡಿಸಲಾಗಿದೆ.
ಶ್ವೇತಾ ಭಟ್ ಅವರ ಈ ಸಾಧನೆ ವಿಶೇಷ ಸಾಮರ್ಥ್ಯದ ಮಕ್ಕಳ ಕಲಾ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಿದ್ದು, ಸಮಾಜಕ್ಕೆ ಪ್ರೇರಣೆಯಾದ ಸಾಧನೆಯಾಗಿದೆ. ಶ್ವೇತಾ ಭಟ್ ಅವರು ಕಾನಸೂರಿನ ರತ್ನಾಕರ ಭಟ್ ಹಾಗೂ ನಾಗರತ್ನ ದಂಪತಿಯ ಪುತ್ರಿಯಾಗಿದ್ದಾಳೆ.
