ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ಅಖಿಲ ಭಾರತ ಹವ್ಯಕ ಮಹಾ ಸಭಾ ದ ಜೋಯಿಡಾ ತಾಲೂಕಾ ಸದಸ್ಯತ್ವ ಅಭಿಯಾನದ ಉಪಸಮಿತಿಯ ಸಂಚಾಲಕರಾಗಿ ಶಿವರಾಮ ಟಿ ದಾನಗೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೇಂದ್ರ ಕಛೇರಿಯ ಪ್ರದಾನ ಕಾರ್ಯದರ್ಶಿ ವೇಣು ವಿಗ್ನೇಶ್ ಅವರು ಈ ಆದೇಶ ವನ್ನು ನೀಡಿದ್ದಾರೆ. ಮಹಾಸಭೆಯ ಆಡಳಿತ ಮಂಡಳಿ, ಕಾರ್ಯಕಾರಿ ಸಮಿತಿ ಸಭೆ ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ತಮ್ಮ ಅಮೂಲ್ಯ ಸಲಹೆ ನೀಡಬೇಕೆಂದು ಆದೇಶ ಪತ್ರದಲ್ಲಿ ಹೇಳಲಾಗಿದೆ.