ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಡಿಸೆಂಬರ್ 6 ರ ಮಧ್ಯರಾತ್ರಿ ಗೋವಾದ ಹಡಪದೆಯ(Night Club) ‘ಬಿರ್ಚ್ ಬೈ ರೋಮಿಯೋ ಲೇನ್’ ಕ್ಲಬ್‍ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ 25 ಅಮಾಯಕರು ಪ್ರಾಣ ಕಳೆದುಕೊಂಡರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಕಳೆದ 47 ದಿನಗಳಲ್ಲಿ Police ತನಿಖೆಯಲ್ಲಿ ಹಲವು ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಈಗ “ED” ಇದರಲ್ಲಿ ಅಕ್ರಮ ಹಣಕಾಸು ವಹಿವಾಟು ಮತ್ತು ಹಣ ವರ್ಗಾವಣೆಯ ಮೂಲ ಬೇರುಗಳನ್ನು ಅಗೆಯಲು ಸಜ್ಜಾಗಿದೆ. ಶುಕ್ರವಾರ ಬೆಳಿಗ್ಗೆಯಿಂದ, ED ಗೋವಾ ಮತ್ತು ದೆಹಲಿ ಸೇರಿದಂತೆ ಒಟ್ಟು 8 ರಿಂದ 9 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಲೂತ್ರಾ ಸಹೋದರರು, ಅಜಯ್ ಗುಪ್ತಾ, ಗೋವಾ ಹಡಪಡೆಯ ಅಂದಿನ ಪಂಚಾಯತ ಅಧ್ಯಕ್ಷ ರೋಷನ್ ರೆಡ್ಕರ್, ಆಗಿನ ಕಾರ್ಯದರ್ಶಿ ರಘುಬೀರ್ ಬಾಗ್ಕರ್ ಮತ್ತು ಇತರ ಸಂಬಂಧಿತ ವ್ಯಕ್ತಿಗಳ ಆಸ್ತಿಗಳನ್ನು ಪರಿಶೀಲಿಸಲಾಗುತ್ತಿದೆ.
ಕ್ಲಬ್‍ನ ಮಾಲೀಕತ್ವದಲ್ಲಿನ ಅನುಮಾನಾಸ್ಪದ ವಹಿವಾಟುಗಳು ಮತ್ತು ಕ್ಲಬ್ ಸ್ಥಾಪನೆಗೆ ಹಣದ ದುರುಪಯೋಗದ ಮೇಲೆ ಇಡಿ ಮುಖ್ಯವಾಗಿ ತನ್ನ ತನಿಖೆಯನ್ನು ಕೇಂದ್ರೀಕರಿಸಿದೆ. ಅಗ್ನಿ ದುರಂತ ಘಟನೆಯ ನಂತರ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಕ್ಲಬ್‍ನ ಮಾಲೀಕರು ನಕಲಿ ಪ್ರಮಾಣಪತ್ರಗಳು (NOC) ಮತ್ತು ಪರವಾನಗಿಗಳನ್ನು ಪಡೆಯುವ ಮೂಲಕ ಈ ವ್ಯವಹಾರವನ್ನು ಮುಂದುವರೆಸಿದ್ದಾರೆ ಎಂದು ಬಹಿರಂಗಪಡಿಸಿತ್ತು. ಕ್ಲಬ್ ನಿರ್ಮಿಸಲಾದ ಭೂಮಿ ಅಕ್ರಮ ಪರಿವರ್ತನೆಯ ಹಿಂದೆ ದೊಡ್ಡ ಆರ್ಥಿಕ ಹಿತಾಸಕ್ತಿ ಇದೆ ಎಂಬ ಅನುಮಾನವಿದೆ. ಈ ಹಿನ್ನೆಲೆಯಲ್ಲಿ, ದೆಹಲಿ ಕಿಂಗ್ಸ್‍ವೇ ಕ್ಯಾಂಪ್ ಮತ್ತು ಗುರುಗ್ರಾಮ್‍ನಲ್ಲಿರುವ ಲುಥ್ರಾ ಸಹೋದರರ ನಿವಾಸಗಳು ಮತ್ತು ಸುರಿಂದರ್ ಕುಮಾರ್ ಖೋಸ್ಲಾ ಅವರ ಆಸ್ತಿಗಳ ಮೇಲೆ ಕೇಂದ್ರೀಕರಿಸಿದೆ ಎನ್ನಲಾಗಿದೆ.
ಮತ್ತೊಂದೆಡೆ, ಗೋವಾದ ಹಡಪಡೆಯ ಆಗಿನ ಪಂಚಾಯತ ಅಧ್ಯಕ್ಷ ರೋಷನ್ ರೆಡ್ಕರ್ ಅವರನ್ನು ಅಂತಿಮವಾಗಿ ಹಣಜುನ್ Police ಬಂಧಿಸಿದ್ದಾರೆ. ಬಿರ್ಚ್ ಕ್ಲಬ್‍ಗೆ ಅಕ್ರಮ ಪರವಾನಗಿಗಳು ಮತ್ತು ನಿರಾಕ್ಷೇಪಣಾ ಪ್ರಮಾಣಪತ್ರಗಳನ್ನು ಪಡೆಯಲು ಸರಪಂಚ್ ಹುದ್ದೆಯನ್ನು ದುರುಪಯೋಗಪಡಿಸಿಕೊಂಡ ಆರೋಪ ರೆಡ್ಕರ್ ಮೇಲಿದೆ. ಅವರನ್ನು ಕೆಲ ದಿನಗಳ ಹಿಂದೆಯೇ ಪಂಚಾಯತ್ ಇಲಾಖೆ ಅನರ್ಹಗೊಳಿಸಿತ್ತು. ಬಂಧನಕ್ಕೆ ಹೆದರಿ, ರೆಡ್ಕರ್ ಗೋವಾದ ಬಾಂಬೆ ಹೈಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು, ಆದರೆ ನ್ಯಾಯಾಲಯ ಜಾಮೀನು ತಿರಸ್ಕರಿಸಿತ್ತು.
ನ್ಯಾಯಾಲಯವು ಅವರ ಜಾಮೀನು ತಿರಸ್ಕರಿಸಿದ ನಂತರ, ರೆಡ್ಕರ್ ಗುರುವಾರ ಮಾಪ್ಸಾ ನ್ಯಾಯಾಲಯದಲ್ಲಿ ಶರಣಾದರು, ನಂತರ ಅವರನ್ನು ಪೆÇಲೀಸರು ವಶಕ್ಕೆ ಪಡೆದರು. ಕುತೂಹಲಕಾರಿಯಾಗಿ, ತನಿಖೆಯ ಆರಂಭದಲ್ಲಿ ಪೆÇಲೀಸರು ಅವರನ್ನು ವಿಚಾರಣೆಗೆ ಕರೆದಾಗ, ಸುಮಾರು ನೂರು ಜನರ ಗುಂಪನ್ನು ಒಟ್ಟುಗೂಡಿಸಿ ತನಿಖೆಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ ಎಂದು ಸರ್ಕಾರಿ ವಕೀಲರು ಆರೋಪಿಸಿದ್ದರು. ಪ್ರಸ್ತುತ, ಇಡಿ ತಂಡವು ಆಗಿನ ಪಂಚಾಯತ್ ಕಾರ್ಯದರ್ಶಿ ರಘುವೀರ್ ಬಾಗ್ಕರ್ ಮತ್ತು ರೆಡ್ಕರ್ ಅವರ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದು, ಈ ದಾಳಿಗಳಿಂದ ಹಣಕಾಸಿನ ಅಕ್ರಮಗಳ ಪ್ರಮುಖ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ.
