ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಸಂಜೀವನಿ ಸೇವಾ ಟ್ರಸ್ಟ್, ಗ್ರಾಮ್ ಪಂಚಾಯತ ಆವೇಡಾ, ಕ್ರೂಗರ್ ಫೌಂಡೇಶನ್ ಕಾರವಾರ, ಏಕಲ್ ಅಭಿಯಾನ ಇವರ ಸಂಯುಕ್ತ ಆಶ್ರಯ ದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಆವೇಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸುಮಾರು ೧೨೦ ರೋಗಿಗಳ ತಪಾಸಣೆ ಮಾಡಲಾಯಿತು.

ಜನರಲ್ ಫಿಜಿಸಿಯನ್, ಡಾ.ವೈಶಾಲಿ ಕಿತ್ತೂರ, ಸ್ತ್ರೀ ರೋಗ ತಜ್ಞೆ ಡಾ.ಮಿನಾ ಕಾಮತ್, ಡಾ.ವಸಂತ ಬಾಳಿಗಾ, ಕಣ್ಣಿನ ತಜ್ಞ ಶ್ರೇಯಸ್, ಡಾ .ಗಣೇಶ ವಿರಕ್ತಿಮಠ್ ಇವರು ರೋಗಿಗಳಿಗೆ ಚಿಕಿತ್ಸೆ ನೀಡಿದರು. ಶಿಬಿರದ ಉದ್ಘಾಟನೆಯನ್ನು ಆವೇಡಾ ಗ್ರಾಮ ಪಂಚಾಯತ್ ಅಧ್ಯಕ್ಷ, ಅರುಣಕುಮಾರ ಭಗವತಿರಾಜ್ ಮಾಡಿದರು. ಸಂಜೀವನಿ ಟ್ರಸ್ಟ್ ಸಂಸ್ಥಾಪಕರಾದ ರವಿ ರೇಡಕರ್ ಅಧ್ಯಕ್ಷತೆ ವಹಿಸಿದರು. ಜಯಂತ ಗಾವಡಾ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಸಂಜೀವನಿ ಸಿಬ್ಬಂದಿ ಗಳಾದ ಈಶ್ವರಿ ದೇಸಾಯಿ, ನಾಗವೇಣಿ, ರಶ್ಮಿ ರೇಡಕರ್ ಶಿಬಿರದ ವ್ಯವಸ್ಥೆ ನೋಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮಿ ರಂಗಯ್ಯ ಮುರಾರಿ,
ಸದಸ್ಯರು ,ರೇಣುಕಾ S ಗದ್ದಿ,
ಮೊಹಮ್ಮದ್ ಗೌಸ್,
ಕಮ್ಯುನಿಟಿ ಆರೋಗ್ಯ ಅಧಿಕಾರಿ, ಬಾಲಕೃಷ್ಣ
ಶಾಲಾ ಶಿಕ್ಷಕಿ ಉಷಾ ಜೋಶಿ,
ಆಶಾ ಕಾರ್ಯಕರ್ತೆಯರು, ಊರಿನ ಹಿರಿಯರು,
ಮುಂತಾದವರು ಸಹ ಪಾಲ್ಗೊಂಡಿದ್ದರು.