ಸುದ್ದಿ ಕನ್ನಡ ವಾರ್ತೆ
ಶ್ರೀ ಚನ್ನ ಬಸವಣ್ಣನ ನವರ ಸುಕ್ಷೆತ್ರ ಉಳವಿ ಈಗ ಜಾತ್ರೆಗೆ ಸಿದ್ದವಾಗಿದೆ ಬರುವ ದಿನಾಂಕ 25ರಂದು ರಥ ಸಪ್ತಮಿ ಯಿಂದ ಉಳವಿ ಜಾತ್ರೆಗೆ ಚಾಲನೆ ನೀಡಲಾಗುವದು, ಅಂದು ಬೆಳಿಗ್ಗೆ ಯಿಂದ ಆರಂಭ ಗೊಳ್ಳುವ ದೇವರ ವಿಧಿ ವಿಧಾನ ಗಳು ನಿರಂತರವಾಗಿ ಬರುವ ಫೆ, 5 ರ ಓಕಳಿ ಹಬ್ಬ,ಸಣ್ಣ ರಥ ಎಳೆಯುವದರೊಂದಿಗೆ ಮುಕ್ತಾಯ ವಾಗಲಿದೆ ಈ ನಡುವೆ ಫೆಬ್ರವರಿ 3 ರಂದು ಜಾತ್ರೆಯಲ್ಲಿ ಮದ್ಯಾಹ್ನ 4 ಘಂಟೆಗೆ ಮಹಾ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖ ದಲ್ಲಿ ನಡೆಯುವದು. ಹರ ಹರ ಮಹಾ ದೇವ, ಅಡಕೇಶ್ವರ, ಮಡಕೇಶ್ವರ, ಉಳವಿಶ್ರೀ ಚನ್ನ ಬಸವೇಶ್ವರ, ಹರ ಹರ ಮಹಾ ದೇವ ಎನ್ನುತ್ತ ರಥ ಎಳೆಯುವುದನ್ನು ನೋಡುವುದೇ ಒಂದು ಸೌಭಾಗ್ಯ ಎನ್ನಬಹುದು, ಇಂತ ಸು ದಿನ ಕ್ಕಾಗಿ ಭಕ್ತರು ಕಾಯುತ್ತಿದ್ದಾರೆ. ದಿನಾಂಕ 25 ರಂದು ಬೆಳಿಗ್ಗೆ ಷಟ್ ಸ್ಥಳ ದ್ವಜಾರೋಹಣ ದೊಂದಿಗೆ ಆರಂಭ ವಾಗುವ ಜಾತ್ರೆಯಲ್ಲಿ ಶ್ರೀ ಉಳವಿ ಚನ್ನ ಬಸವೇಶ್ವರ ಟ್ರಸ್ಟ್ ನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮತ್ತು ದೇವಸ್ಥಾನ ನದ ಅರ್ಚಕರು ಭಕ್ತರು ಉಪಸ್ಥಿತರಿರುತ್ತಾರೆ. ಜಾತ್ರೆ ಆರಂಭ ದಿಂದ ಕೊನೆ ವರೆಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು, ಸಣ್ಣ ರಥ, ಪಲ್ಲಕ್ಕಿ ಉತ್ಸವ ಗಳು ಇರುತ್ತವೆ, ಸ್ಥಳೀಯ ಶಾಸಕರು ಮತ್ತು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ದಿನಾಂಕ 25 ರಂದು ಉಳವಿಯಲ್ಲಿ, ವಸತಿ ಗೃಹಗಳ ಉದ್ಘಾಟನೆ ಮಾಡಲಿದ್ದಾರೆ, ಅದೇರೀತಿ,ಅವರು ಫೆ 3 ರಂದು ಮಹಾ ರಥ ಕ್ಕೆಪೂಜೆ ಸಲ್ಲಿಸಿ ರಥೋತ್ಸವ ಕ್ಕೆ ಚಾಲನೆ ನೀಡಲಿದ್ದಾರೆ, ಲಕ್ಷಾಂತರ ಭಕ್ತರು ಬರುವ ಈ ಜಾತ್ರೆಯಲ್ಲಿ ಜನರಲ್ಲಿ ಶಾಂತಿ ಸುವ್ಯವಸ್ತೆ ಕಾಪಾಡುವ ಜವಾಬ್ದಾರಿ ಆರಕ್ಷಕರ ಮೇಲಿದೆ. ಇದಕ್ಕೆಲ್ಲ ಆಡಳಿತ ಮಂಡಳಿ ಅಧ್ಯಕ್ಷರು ಸಂಜಯ ಕಿತ್ತೂರ ಉಪಾಧ್ಯಕ್ಷರು ಪ್ರಕಾಶ ಕಿತ್ತೂರ ಗಣ್ಯರಾದ ಬಿ ಸಿ ಉಮಾಪತಿ, ಮಾಜಿ ಅಧ್ಯಕ್ಷರು ಗಂಗಾಧರ ಕಿತ್ತೂರ, ಬಿ ಡಿ ಪಾಟೀಲ, ನಿಜಲಿಂಗಯ್ಯ ಹಿರೇಮಠ, ಸದಾ ಸಹಕರಿಸುತ್ತಿದ್ದಾರೆ.
