ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದ ಹೆಣಕೋಳದಲ್ಲಿ.ನಂದಿಗದ್ದೆ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬವನ್ನು ಸಂಭ್ರಮದಿಂದ ನಡೆಸಲಾಯಿತು. ಉಳವಿ ಗ್ರಾಮ ಪಂಚಾಯತ್ ಸದಸ್ಯ ವಿಷ್ಣು ಬಿರಂಗತ ರವರು ಉದ್ಘಾಟನೆ ಮಾಡಿ… ಮಕ್ಕಳ ಕಲಿಕಾ ಹಬ್ಬ ವಿನೂತನ ರೀತಿಯಿಂದ ಆಚರಿಸುತ್ತಿದ್ದು, ಇದು ಮಕ್ಕಳಿಗೆ ಚೇತೋಹಾರಿಯಾಗಿದೆ ಎಂದರು. ಮೊಳಂಗಿ ಶಾಲೆಯ ಹಿರಿಯ ಶಿಕ್ಷಕ ಶ್ರೀ ಕಾಂತ್ ನಾಯ್ಕ್ ರವರು ಮಾತನಾಡಿ ಇಲಾಖೆಯಲ್ಲಿ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು. ಸಮಾರಂಭದ ಅಧ್ಯಕ್ಷ ತೆ ಯನ್ನು sdmc ಅಧ್ಯಕ್ಷ ರಾದ ವಾಸು ಬಿರಂಗತವಹಿಸಿ ಕಾರ್ಯಕ್ರಮಕ್ಕೆ ಶುಭಾಶಯ ಹೇಳಿದರು.. ವೇದಿಕೆಯಲ್ಲಿ ಶಿಕ್ಷಕಸಂಘದ ಉಪಾಧ್ಯಕ್ಷ ಶಶಿಕಾಂತ್ ಕಾಂಬ್ಳೆ ವಾಮನ ಮೀರಾಶಿ ಅನಂತ್ ದಾತೋಡ್ಕರ್ ವೆಂಕಣ್ಣ ಮೀರಾಶಿ ವಾಸು ಮೀರಾಶಿ ಮುಂತಾದವರು ಉಪಸ್ಥಿತರಿದ್ದರು.. ಶಾಲೆಯ ಮುಖ್ಯ ಶಿಕ್ಷಕಿ ಕುಮಾರಿ ರಶ್ಮಿ ಹಳದಿಪುರ್ ಸ್ವಾಗತಿಸಿದರು ಸಂಪನ್ಮುಲ ವ್ಯಕ್ತಿ ಭಾಸ್ಕರ್ ಗಾoವ್ಕಾರ್ ನಿರೂಪಿಸಿ ಪ್ರಾಸ್ತವಿಕ ಮಾತನ್ನೂ ಆಡಿದರು.. ಒಟ್ಟೂ 7 ಸ್ಪರ್ಧೆ ಗಳಲ್ಲಿ ಕ್ಲಸ್ಟರ್ ನ 12 ಶಾಲೆಗಳಿಂದ fln ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ದೊಂದಿಗೆ ಪ್ರಶಸ್ತಿ ಪತ್ರ ನೀಡಲಾಯಿತು.. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಅಭಿನಂದನಾ ಪತ್ರ ನೀಡಲಾಯಿತು. ನಿರ್ಣಯ ನೀಡಲು ಬಂದ ಶಿಕ್ಷಕರಿಗೂ ಅಭಿನಂದನಾ ಪತ್ರ ನೀಡಲಾಯಿತು… ಬೆಳಿಗ್ಗೆ ಎಲ್ಲರಿಗೂ ಉಪಹಾರ ಮತ್ತು ಚಹಾ ನೀಡಿ ಮಧ್ಯಾಹ್ನ ಶುಚಿ ರುಚಿಯಾದ ಸಿಹಿ ಊಟ ನೀಡಲಾಯಿತು. ಹೆಣಕೋಳ ಗ್ರಾಮದ ಎಲ್ಲರೂ ತಮ್ಮ ಊರ ಹಬ್ಬದಂತೆ ಸಂಭ್ರಮಿಸಿದರು ಮತ್ತು ಸಹಕಾರ ನೀಡಿದರು.