ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಪ್ರತಿವರ್ಷದಂತೆ ದಿನಾಂಕ:25/01/2026 ರ ರವಿವಾರ ಕಾಟೇಲ್ (ಕುಂಬಾರವಾಡಾ)ಗ್ರಾಮದಲ್ಲಿ ಶ್ರೀ ಸಿದ್ಧೇಶ್ವರ ಸದ್ಗುರು ಶಾಂಡಿಲ್ಯ ಮಹಾರಾಜ ದೇವರ ವಾರ್ಷಿಕೋತ್ಸವ ನಡೆಯಲಿದೆ. ಬೆಳಿಗ್ಗೆ 11-00 ಗಂಟೆಗೆ ಪೂಜೆ,1-30 ಗಂಟೆಗೆ ತೀರ್ಥ ಪ್ರಸಾದ ಮತ್ತು ಅನ್ನಪ್ರಸಾದ ಇರುತ್ತದೆ.ರಾತ್ರಿ 8-00 ಗಂಟೆಗೆ ಶಾಂಡಿಲ್ಯ ಮಹಾರಾಜ ದೇವರ ಪಾಲಕಿ ಮೆರವಣಿಗೆ ಇರುತ್ತದೆ.ಅಂದು ರಾತ್ರಿ 8-00 ರಿಂದ 11-00 ಗಂಟೆಯವರೆಗೆ ಸವಾಲ್ ಕಾರ್ಯಕ್ರಮ ಹಾಗೂ ರಾತ್ರಿ 11-00 ಗಂಟೆಯಿಂದ ಶ್ರೀ ಸಿದ್ಧೇಶ್ವರ ಸದ್ಗುರು ಶಾಂಡಿಲ್ಯ ಮಹಾರಾಜ ನಾಟ್ಯ ಕಲಾ ಬಳಗ ಕಾಟೇಲ್(ಕುಂಬಾರವಾಡಾ)ಮತ್ತುಸಹ್ಯಾದ್ರಿ ಕಲಾಬಳಗ ಅರ್ಪಿಸುವ ಮತ್ತೆ ಹುಟ್ಟಿದ ಮುತ್ತೈದೆ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸ ಬೇಕೆಂದು ಕಾರ್ಯಕ್ರಮದ ವ್ಯವಸ್ಥಾಪಕರು ವಿನಂತಿಸಿಕೊಂಡಿದ್ದಾರೆ.