ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನಲೇನ್ ಶಾಲೆಯ ಶಿಕ್ಷಕ ವೃಂದದವರು,ಪಾಲಕರ,ಪೋಷಕರ ಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಹೊರಸಂಚಾರ ಕಾರ್ಯಕ್ರಮವನ್ನು ರಾಮನಗರ ಸಮೀಪದ ಮಾವಿನತೋಟದಲ್ಲಿ ಇಟ್ಟುಕೊಂಡಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರಕ್ಕೆ ಸಂಬಂಧಿಸಿದ ಗಿಡ,ಮರ,ಬಳ್ಳಿಗಳ ಬಗ್ಗೆ,ಪ್ರಾಣಿ,ಪಕ್ಷಿಗಳ ಕುರಿತು,ನೀರಿನ ಮೂಲಗಳ ಕುರಿತು ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು,ಹನುಮಾನಲೇನ್ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಸರ್ ರವರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ,ಅನೀಸ್ ಫಾತಿಮಾ, ನಾಗರತ್ನಾ ಮೊಗೇರ, ಸುನೀತಾ ಆರ್, ಸಂಜನಾ ಮಿರಾಶಿ ವಿವಿಧ ವಿಷಯಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು. ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಂದ ತಿಂಡಿಗಳನ್ನು ಪರಸ್ಪರ ಎಲ್ಲರೊಂದಿಗೆ ಹಂಚಿ ತಿಂದರು.
ನಂತರ ವಿದ್ಯಾರ್ಥಿಗಳು ತಮಗೆ ಇಷ್ಟವಾದ ಆಟಗಳನ್ನು ಆಡಿದರು. ಮಧ್ಯಾಹ್ನದ ವೇಳೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸಚಿಕುಮಾರ ನಾಯರ ಹಾಗೂ ಸಮಿತಿಯ ಪದಾಧಿಕಾರಿಗಳ, ಪಾಲಕರ ಸಹಕಾರದಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಸ್ಥಳೀಯರ ಗ್ರಾಮದ ಗ್ರಾಮಸ್ಥರ ಸಹಕಾರದಿಂದ ಮಾಡಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ಹೊರಸಂಚಾರ ಕಾರ್ಯಕ್ರಮದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡರು.
