ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕಿನ ಅವೇಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಅವೇಡಾ ಶಾಲೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಹಳಿಯಾಳ ಜೋಯಿಡಾ ಕ್ಷೇತ್ರದ ಶಾಸಕರು,ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್ ವಿ ದೇಶಪಾಂಡೆಯವರು ನೆರವೇರಿಸಿದರು.

ಕಟ್ಟಡ ಉದ್ಘಾಟನೆಯ ಆರಂಭದಲ್ಲಿ ಮಾನ್ಯ ಶಾಸಕರಿಗೆ,ಗಣ್ಯರಿಗೆ ವಿದ್ಯಾರ್ಥಿಗಳು,ಪೂರ್ಣಕುಂಭ ಹೊತ್ತ ಮಹಿಳೆಯರು, ಮಾತೆಯರು ಆರತಿಯನ್ನು ಬೆಳಗಿಸಿ ಭವ್ಯವಾಗಿ ಸ್ವಾಗತಿಸಿದರು. ನಂತರ ಶಾಲೆಯ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮವನ್ನು ನೆರವೇರಿಸಿದರು.ಹೊಸ ಕಟ್ಟಡದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವೇಡಾ ಶಾಲೆಯ ಮುಖ್ಯ ಶಿಕ್ಷಕರಾದ ರೋಹಿದಾಸ ಮಡಿವಾಳ ಉಪಸ್ಥಿತರಿದ್ದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಶಾಸಕರಾದ ಆರ್ ವಿ ದೇಶಪಾಂಡೆಯವರು ಹಾಗೂ ಉಪಸ್ಥಿತರಿದ್ದ ಗಣ್ಯರು ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರಾದ ಆರ್ ವಿ ದೇಶಪಾಂಡೆಯವರು ನಮ್ಮ ಘನ ಸರ್ಕಾರವು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತದೆ. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಕೇವಲ ಸರ್ಕಾರದಿಂದ ಮಾತ್ರ ಸಾದ್ಯವಿಲ್ಲ,ಸಮುದಾಯದ ಸಹಭಾಗಿತ್ವ ಮುಖ್ಯ,ಸರ್ಕಾರದ ಯೋಜನೆಗಳ ಲಾಭವನ್ನು ಎಲ್ಲರೂ ಸರಿಯಾಗಿ ಪಡೆದುಕೊಳ್ಳಬೇಕು,ಶಿಕ್ಷಕರು ಸಹ ತಮ್ಮ ಜ್ಞಾನವನ್ನು ಉತ್ತಮವಾಗಿ ಮಕ್ಕಳಿಗೆ ನೀಡುವುದರ ಮೂಲಕ ಎಲ್ಲರೂ ಶಿಕ್ಷಣವಂತರಾಗಿ ಮುಂದೆ ಬರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾನ್ಯ ಶಾಸಕರನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್ ಗ್ರಾಮ ಪಂಚಾಯತ ಹಾಗೂ ಶಾಲೆಯ ವತಿಯಿಂದ ಎಲ್ಲರ ಪರವಾಗಿ ಗೌರವಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್,ಕೆ ಪಿ ಸಿ ಸಿ ಸದಸ್ಯರಾದ ಸದಾನಂದ ದಬಗಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ,ಜೋಯಿಡಾ ತಹಶೀಲ್ದಾರ ಮಂಜುನಾಥ ಮುನ್ನೋಳ್ಳಿ,ತಾಲೂಕಾ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎನ್ ಭಾರತಿ ಮೇಡಂ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ಎಸ್ ಡಿ ಎಂ ಸಿ ಅಧ್ಯಕ್ಷರಾದ ರೂಪಾ ಧೂಳಪ್,ಉಪಾಧ್ಯಕ್ಷರು ದೀಪಕ ದಳವಿ,ಸರ್ವ ಸದಸ್ಯರು,ಗ್ರಾಮ ಪಂಚಾಯತ ಉಪಾಧ್ಯಕ್ಷೆ ಲಕ್ಷ್ಮೀ ಮುರಾರಿ,ಸದಸ್ಯರಾದ ಅಜಿತ ಥೋರವತ,ಮಹಮ್ಮದ್ ಗವ್ಸ್ ಅಮ್ಮಿನಭಾವಿ, ರೇಣುಕಾ ಗದ್ದಿ,ವಿವಿಧ ಇಲಾಖೆಯ ತಾಲೂಕಾ ಸ್ತರದ ಅಧಿಕಾರಿ ವರ್ಗದವರು, ಅವೇಡಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಲೀನಾ ನಾಯ್ಕ,ವಿವಿಧ ಕ್ಷೇತ್ರದ ಗಣ್ಯರು,ಅಂಗನವಾಡಿ ಕಾರ್ಯಕರ್ತೆಯರು,ಆಶಾ ಕಾರ್ಯಕರ್ತೆಯರು,ಸ್ವಸಹಾಯ ಸಂಘದ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಗಳನ್ನು ಅವೇಡಾ ಶಾಲೆಯ ಸಹ ಶಿಕ್ಷಕಿಯಾದ ದೀಪಾ ನಾಯ್ಕ ಸಲ್ಲಿಸಿದರು.ಉಷಾ ನಾಯ್ಕ ಸಹಕಾರ ನೀಡಿದರು.