ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಅಳತೆಗಳಿಲ್ಲದೆ ಜೀವನ ಸಾಧ್ಯವಿಲ್ಲ”
ಮಕ್ಕಳಿಗೆ ಗಣಿತದಲ್ಲಿ ಆಸಕ್ತಿ ಮೂಡಿಸಲು ಅವರನ್ನು ವ್ಯವಹಾರಿಕವಾಗಿ ಸದೃಢಗೊಳಿಸಲು ಸ್ವಕಲಿಕೆಗೆ ಮುಕ್ತ ಅವಕಾಶ ನೀಡಲು ಔಪಚಾರಿಕ ಶಿಕ್ಷಣದ ಹೊರತಾಗಿ ಗಣಿತದ ಸರಳತೆ ಸುಂದರತೆಯನ್ನು ಮತ್ತು ನಿರ್ದಿಷ್ಟತೆಯನ್ನು ಅನೌಪಚಾರಿಕವಾಗಿ ಮಕ್ಕಳಿಗೆ ಅರ್ಥೈಸಲು ಅನುಭವಿಸಲು ನಡೆಸುವ ಉಪಯುಕ್ತವಾದ ಕಾರ್ಯಕ್ರಮ ಮೆಟ್ರಿಕ್ ಮೇಳವನ್ನು
ದಿನಾಂಕ 21/01/2026 ಪಿ .ಎಂ. ಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜೋಯಿಡಾದಲ್ಲಿ ಬಹಳ ವಿಜೃಂಭಣೆಯಿಂದ ನಡೆಸಲಾಯಿತು.

ತರಕಾರಿ ತೂಕ ಮಾಡಿ, ವಿದ್ಯಾರ್ಥಿಗಳ ಎತ್ತರವನ್ನು ಅಳೆದು, ಬಣ್ಣದ ದ್ರಾವಣಗಳನ್ನು ಅಳತೆ ಮಾಡಿ ವಿನೂತನವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ,ತಾಲೂಕು ಪಂಚಾಯಿತಿಯ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕಾರ್ಯಾಲಯದ ಅಧಿಕಾರಿಗಳು , ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳು ಮತ್ತು ಕಾರ್ಯಾಲಯದ ಅಧಿಕಾರಿಗಳು , ಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲಕ ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ಮುಖ್ಯ ಶಿಕ್ಷಕರು, ಎಲ್ಲಾ ಸಹ ಶಿಕ್ಷಕರು ವಹಿಸಿಕೊಂಡು ಬಹಳ ವಿಜ್ರಂಬಣೆಯಿಂದ ನಡೆಸಿಕೊಟ್ಟರು.ವಿದ್ಯಾರ್ಥಿಗಳು ತಾವೇ ಸ್ವತಃ ಅಂಗಡಿಗಳನ್ನು ನಿರ್ಮಿಸಿ ತರಕಾರಿ ಹಣ್ಣು ಹಂಪಲುಗಳು, ಗಡ್ಡೆ ಗೆಣಸು, ತಂಪು ಪಾನೀಯಗಳನ್ನು ಮಾರಾಟ ಮಾಡಿ ವ್ಯವಹಾರಿಕ ಜ್ಞಾನವನ್ನು ಪಡೆದರು. ಜೊತೆಗೆ ಮೋಜಿನ ಆಟಗಳ ಅಂಗಡಿಗಳನ್ನು ನಿರ್ಮಿಸಿ ಮೆಟ್ರಿಕ್ ಮೇಳ ಕಾರ್ಯಕ್ರಮವನ್ನು ಬಹಳ ಉತ್ತಮವಾಗಿ ನಡೆಸಿದರು.