ಸುದ್ದಿ ಕನ್ನಡ ವಾರ್ತೆ
ರಾಮನಗರ: ತಾಲ್ಲೂಕಿನ ಪ್ರಮುಖ ಕೇಂದ್ರವಾದ ರಾಮನಗರ ದಲ್ಲಿ ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯಜಿ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮವನ್ನು ಇಂದು ಭಕ್ತಿಭಾವ ದಿಂದ ಹಮ್ಮಿಕೊಳ್ಳಲಾಗಿದೆ. ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ದಕ್ಷಿಣ ಪೀಠ ನಾಣಿಜ್ ಅವರ ಪಾದುಕಾ ದರ್ಶನಕ್ಕೆ ತಾಲೂಕಿನಾದ್ಯಂತ ಭಕ್ತರು ಕಾತರ ದಿಂದ ನಿರೀಕ್ಷೆ ನಡೆಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಶ್ರೀಗಳ ಪಾದುಕೆ ರಾಮನಗರಕ್ಕೆ ಆಗಮಿಸಲಿದ್ದು, ಈ ಹಿನ್ನೆಲೆ ಯಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಪಾದುಕೆಯ ಆಗಮನದ ನಂತರ ಸಾಮಾಜಿಕ ಉಪಕ್ರಮಗಳು, ಗುರುಪೂಜೆ, ಆರತಿ ಸಮಾರಂಭ, ಪ್ರವಚನ, ಉಪಾಸಕ ದೀಕ್ಷೆ, ಭಕ್ತರ ದರ್ಶನ, ಪುಷ್ಪವೃಷ್ಟಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುವವು
ಈ ಭವ್ಯ ಧಾರ್ಮಿಕ ಕಾರ್ಯಕ್ರಮಕ್ಕೆ ರಾಮನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ರಾಮನಗರದ ಶ್ರೀ ರಾಮಲಿಂಗ ದೇವಸ್ಥಾನದ ಆವರಣದಲ್ಲಿ ಕೈಗೊಳ್ಳಲಾಗಿದೆ.
ಭಕ್ತರು ತಮ್ಮ ಕುಟುಂಬ ಹಾಗೂ ಪರಿವಾರದ ಸಮೇತ ಆಗಮಿಸಿ ಪಾದುಕಾ ದರ್ಶನ ಮತ್ತು ಗುರುಪೂಜೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗ ಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ. ಕಾರ್ಯಕ್ರಮ ಶಾಂತಿಯುತವಾಗಿ ಹಾಗೂ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ವಿಕಾಸ್ ವೇಳಿಪ್ ತಿಳಿಸಿದ್ದಾರೆ.ಈ ಧಾರ್ಮಿಕ ಕಾರ್ಯಕ್ರಮವು ರಾಮನಗರದಲ್ಲಿ ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವಿಕಾಸ್ ವೇಳಿಪ್, ಪ್ರೋಟೋಕಾಲ್ ಅಧಿಕಾರಿ ಪ್ರಕಾಶ್ ವೇಳಿಪ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಪೂಜಾ ಗಾವಡಾ, ಉತ್ಸವ ಸಮಿತಿ ಅಧ್ಯಕ್ಷ ಮಹಾದೇವ್ ಪಾಲೇಕರ್, ವಿಶೇಷ ಕಾರ್ಯವಾಹಕ ಉತ್ತಮ್ ಮಿರಾಶಿ, ದೇಣಿಗೆ ಪ್ರಮುಖ ಆನಂದ್ ಗಾವಡಾ, ತಾಲ್ಲೂಕು ಅಧ್ಯಕ್ಷ ಸುರೇಂದ್ರ ಮಿರಾಶಿ, ಕಾರ್ಯದರ್ಶಿ ಪ್ರವೀಣ್ ದೇಸಾಯಿ ಸಂಜೀವನಿ ಪ್ರಮುಖ ದಯಾನಂದ್ ಮಿರಾಶಿ, ವಸಂತ್ ಗಾವ್ಕರ್, ಮಾಜಿ ತಾಲ್ಲೂಕು ಅಧ್ಯಕ್ಷ ಸಂದೀಪ್ ಗಾವಡಾ ಸೇರಿದಂತೆ ಇತರರು ಮಾಹಿತಿ ನೀಡಿದ್ದಾರೆ
