ಸುದ್ದಿ ಕನ್ನಡ ವಾರ್ತೆ
ಜೊಯಿಡಾ; ತಾಲ್ಲೂಕು ಕೇಂದ್ರಕ್ಕೆ ನೀರು ಪೂರೈಸುವ ಹತ್ತಿರದ ನಾಲಾದಲ್ಲಿ ಸತ್ತ ಕೊಳೆತ ಕಾಡು ಪ್ರಾಣಿಯನ್ನು ಪಶುವೈದ್ಯಾಧಿಕಾರಿಗಳು ಹಂದಿ ಎಂದು ಗುರುತಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಜೊಯಿಡಾ ವಲಯ ಅಧಿಕಾರಿಗಳು ಮತ್ತು ಪಶುಸಂಗೋಪನೆ ಇಲಾಖೆ ವೈದ್ಯಾಧಿಕಾರಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ವಯೋ ಸಹಜಸಾವೆಂದು ದೃಢಪಡಿಸಿದ್ದಾರೆ.
ಜೊಯಿಡಾ ಕುಡಿಯುವ ನೀರು ಪೂರೈಸುವ ಯೋಜನೆಯ ಹತ್ತಿರ ಹತ್ತಾರು ದಿನಗಳ ಹಿಂದೆ ಹಂದಿ ಸತ್ತಿದ್ದು ಕೊಳೆತು ಹೋಗಿತ್ತು. ಸೋಮವಾರ ಜೊಯಿಡಾ ವಲಯ ಅರಣ್ಯಾಧಿಕಾರಿ ಪ್ರವಿಣ ಚಲವಾದಿ ಮಾರ್ಗದರ್ಶನದಲ್ಲಿ ಅರಣ್ಯ ಸಿಬ್ಬಂದಿ ಹಾಗೂ ತಾಲೂಕು ಪಶು ವೈದ್ಯಾಧಿಕಾರಿ ಮಂಜಪ್ಪ ಎ ಸ್ಥಳಕ್ಕೆ ಹೋಗಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇದು ಸಹಜ ಸಾವಾಗಿರಬಹುದು ಅಥವಾ ಕಾಡು ಬೇಟೆ ನಾಯಿಗಳಿಂದ ದಾಳಿ ಮಾಡಿ ಸತ್ತಿರ ಬಹುದು. ಗುಂಡು ವಗೈರೆ ಸಿಕ್ಕಿದ್ದು ಇರುವುದಿಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಡಿಸಿದ್ದಾರೆ.
ಸ್ಥಳಿಯರು ಹೆದರುವ ಅಗತ್ಯವಿಲ್ಲ.:- ಪಿ. ಡಿ. ಓ. ಜೋಯಿಡಾ.
ಜೊಯಿಡಾ ನೀರು ಪೂರೈಸುವ ಯೋಜನೆಯ ಸ್ಥಳದಿಂದ ದೂರದಲ್ಲಿ ಹಂದಿ ಸತ್ತಿದೆ. ಈ ನಾಲಾ ನೀರನ್ನು ಕುಡಿಯುವ ನೀರು ಸರಬರಾಜು ಟ್ಯಾಂಕಿಗೆ ಬಳಸುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಗ್ರಾಮ ಪಂಚಾಯತ್ ಜೊಯಿಡಾ ಪಿ. ಡಿ. ಓ. ಮೋಹನ್ ಡೊಂಬರ ತಿಳಿಸಿರುತ್ತಾರೆ.
