ಸುದ್ಧಿಕನ್ನಡ ವಾರ್ತೆ
ಬಿಗ್ ಬಾಸ್ ಸೀಜನ್ 12 ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿನಟ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಶೋ ಆರಂಭದಿಂದಲೇ ಗಿಲ್ಲಿ ನಟ ಗೆಲ್ಲುತ್ತಾರೆ ಎಂದು ಜನ ಭವಿಷ್ಯ ನುಡಿಯುತ್ತಿರುವುದು ಕೊನೆಗೂ ನಿಜವಾದಂತಾಗಿದೆ.
ಭಾನುವಾರ ನಡೆದ ಬಿಗ್ ಬಾಸ್ 12 ರ ಭರ್ಜರಿ ಫಿನಾಲೆಯಲ್ಲಿ ಗಿಲ್ಲಿ ಸೇರಿದಂತೆ ಧನುಷ್ ಗೌಡ, ರಘು, ಕಾವ್ಯ, ರಕ್ಷಿತಾ ಶೆಟ್ಟಿ ಮತ್ತು ಅಶ್ವಿನಿಗೌಡ ಈ ಟಾಪ್ 6 ಸ್ಫರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಕೊನೇಯ ಹಂತದಲ್ಲಿ ಮತಗಳ ಅಂತರ ತೀರಾ ಕಡಿಮೆ ಇದ್ದುದಾಗಿ ಬಿಗ್ ಬಾಸ್ ನಿರೂಪಕರಾದ ಕಿಚ್ಚ ಸುದೀಪ ತಿಳಿಸಿದ್ದಾರೆ. ಈ ಭಾರಿ ಪೈಪೋಟಿಯ ನಡುವೆಯೇ ಟ್ರೋಫಿ ಗೆದ್ದಿದ್ದಾರೆ. ರಕ್ಷಿತಾ ಶೆಟ್ಟಿ ರವರು ರನ್ನರ್ ಅಫ್ ಆಗಿದ್ದಾರೆ.
ಬಿಗ್ ಬಾಸ್ ಫಿನಾಲೆಗೂ ಮುನ್ನವೇ ಗಿಲ್ಲಿ ನಟನಿಗೆ ಅಭಿಮಾನಿಗಳ ಬೆಂಬಲ ಕಂಡುಬಂದಿತ್ತು. ಅವರು ತಮ್ಮ ನೇರವಾದ ಮಾತು ಹಾಗೂ ಟಾಸ್ಕಗಳಲ್ಲಿ ದಕ್ಷತೆಯಿಂದ ಗಮನ ಸೆಳೆದಿದ್ದರು. ಫಿನಾಲೆ ದಿನದಂದು ಬಿಗ್ ಬಾಸ್ ಮನೆಯ ಹೊರ ಭಾಗದಲ್ಲಿ ಗಿಲ್ಲಿಯ ಕಟೌಟ್ ಗಳು , ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು, ಹಾಲಿನ ಅಭಿಷೇಕ ಕೂಡ ಮಾಡಲಾಗಿತ್ತು. ನೂರಾರು ಜನ ಸೇರಿದ್ದರಿಂದ ಜನಸಂದಣಿ ನಿಯಂತ್ರಿಸಲು ಪೋಲಿಸರು ಹರಸಾಹಸ ಪಡಬೇಕಾಯಿತು.
ಗಿಲ್ಲಿ ಬಿಗ್ ಬಾಸ್ ವಿನ್ನರ್ ಆಗಿ ಘೋಷಣೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮದ ಮಹಾಪುರವೇ ಹರಿದುಬಂದಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿದ ಗಿಲ್ಲಿ ನಟ ಒಬ್ಬ ಹಾಸ್ಯ ನಟ, ಯೂಟೂಬರ್ ಆಗಿ ಪ್ರಸಿದ್ಧಿಪಡೆದಿದ್ದಾರೆ.
