ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ವಾಗೇಲಿಯಲ್ಲಿ ಶ್ರೀ ಮಹಾದೇವ ಯುಥ್ ಕ್ಲಬ್ ವಾಗೇಲಿ ಹಾಗೂ ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ದಿನಾಂಕ :14/01/2026 ರಿಂದ ನಡೆದ ಆಹ್ವಾನಿತ ತಂಡಗಳ ಗ್ರಾಮೀಣ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೋಯಿಡಾದ ಅಮೃತಪಾಲಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಉದ್ಘಾಟನಾ ಸಮಾರಂಭವು ಗಣ್ಯರು,ಕ್ರೀಡಾಪ್ರೇಮಿಗಳು ಹಾಗೂ ಊರ ನಾಗರೀಕರ ಸಮ್ಮುಖದಲ್ಲಿ ಬುಧವಾರ ದಿನಾಂಕ :14/01/2026 ರಂದು ಬೆಳಿಗ್ಗೆ ನಡೆಯಿತು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಆಟಗಾರರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಸಂಘಟಕರಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಸಂಘಟಕರು ಮಾಡಿದ್ದರು.ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾ ತಂಡಗಳು ಕ್ರೀಡಾಮನೋಭಾವದಿಂದ ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿ ಗೊಳಿಸಿದರು.
ಕೊನೆಯ ದಿನದ ಅಂತಿಮ ಪೈನಲ್ ಪಂದ್ಯದಲ್ಲಿ ಜೋಯಿಡಾದ ಅಮೃತಪಾಲಿ ತಂಡವು ಅಣಶಿ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ಅಣಶಿ ತಂಡವು ದ್ವಿತೀಯ ರನ್ನರ್ ಅಪ್ ಸ್ಥಾನ ಪಡೆಯಿತು.ಸಮಾರೋಪ ಹಾಗೂ ಬಹುಮಾನ ವಿತರಣೆಯ ಕಾರ್ಯಕ್ರಮದಲ್ಲಿ ವಾಗೇಲಿ ಗ್ರಾಮದ ಪ್ರಮುಖರು ಹಾಗೂ ಪರಊರಿನ ಗಣ್ಯರು ಉಪಸ್ಥಿತರಿದ್ದರು.
