ಸುದ್ದಿ ಕನ್ನಡ ವಾರ್ತೆ
ಬರುವ ರವಿವಾರ ದಿನಾಂಕ 18 ರಂದು ಯರಮುಖ ಶ್ರೀ ಸೋಮೇಶ್ವರ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಶ್ರೀ ದೇವರ ಜಾತ್ರೆಯ ಅಂಗವಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಶತರುದ್ರಾಭಿಷೇಕ, ರುದ್ರ ಹವನ, ರಂಗ ಪೂಜೆ, ಬಲಿ , ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಮತ್ತು ಅನ್ನ ಸಂತರ್ಪಣೆ ಗಳು ನಡೆಯಲಿವೆ,
ವೇದಮೂರ್ತಿ ಕಟ್ಟೆ ಶಂಕರ ಭಟ್ ರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಸೀಮೆಯ ಸಂಬಂಧ ಪಟ್ಟ ಜನರು ಜಾತ್ರೆ ತಯಾರಿಗೆ. ಮತ್ತು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ದೇವರ ಅನುಗ್ರಹ ಕ್ಕೆ ಪಾತ್ರರಾಗಬೇಕೆಂದು ಕಮಿಟಿಯ ಗೌರವ ಅಧ್ಯಕ್ಷರು ಪ್ರಸನ್ನ ಭಟ್ ಅಧ್ಯಕ್ಷರು ಮಂಜುನಾಥ್ ಭಾಗ್ವತ್, ಉಪಾಧ್ಯಕ್ಷರು ಪ್ರವೀಣ್ ಭಟ್ ಮತ್ತು ಕಾರ್ಯದರ್ಶಿ ಗಳು ದತ್ತಾತ್ರಯ ಹೆಗಡೆ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಜಾತ್ರೆಯ ದಿನ ಬೆಳಿಗ್ಗೆ 10 ಘಂಟೆಯಿಂದ ಮಾತೃ ಮಂಡಳದ ಮಾತೆಯರಿಂದ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ.
