ಸುದ್ದಿ ಕನ್ನಡ ವಾರ್ತೆ
ಜೊಯಿಡಾ : ಸಂಕ್ರಾಂತಿ ಹಬ್ಬದ ಸವಿನೆನಪಿನಲ್ಲಿ ಶೇವಾಳಿ ಯಲ್ಲಿ ದೇಸಾಯಿ ಕುಟುಂಬದವರು ವನಭೋಜನ ಕಾರ್ಯಕ್ರಮ ವನ್ನು ಯಶಸ್ವಿ ಯಾಗಿ ನಡೆಸಿದರು.
ಕಳೆದ ಕೆಲವು ವರ್ಷ ಗಳಿಂದ ಬೆಳದಿಂಗಳ ಊಟ, ಪರಿಸರದಲ್ಲಿ ಹಗಲು ವೇಳೆ ವನಭೋಜನ ನಡೆಸುತ್ತಿದ್ದವರು ಈಗ ಐದು ವರ್ಷ ಗಳಿಂದ ಸಂಕ್ರಾಂತಿಯ ದಿನ ವನಭೋಜನ ಕಾರ್ಯಕ್ರಮ ವನ್ನು ನಡೆಸಿ ಕೊಂಡು ಬರುತ್ತಿದ್ದಾರೆ, ಇದಕ್ಕೆಲ್ಲ ಸ್ಥಳೀಯ ಉತ್ಸಾಹಿ ಮಹಿಳೆಯರೇ ಕಾರಣ ಅವರಿಗೆ ಎಲ್ಲ ಗಂಡಸರೂ ಸಾಥ್ ನೀಡುತ್ತಿದ್ದಾರೆ. ಈ ಮೊದಲೇ ನಿರ್ಧರಿಸಿದಂತೆ ಕುಟುಂಬದ ಪ್ರತಿಯೊಂದು ಮನೆಯವರೂ ತಮಗೆ ಕೊಟ್ಟ ಆಹಾರ ಪದಾರ್ಥ ಗಳನ್ನು ತಯಾರಿಸಿಕೊಂಡು ವನಭೋಜನಕ್ಕೆ ನಿಗದಿಯಾದ ಸ್ಥಳಕ್ಕೆ ತಂದು ಸಹಕರಿಸಿದರು ವಿವಿಧ ಬಗೆಯ ಅಡುಗೆ ಜೊತೆಗೆ ಮಕರ ತಿಂಗಳ ವಿಶೇಷ ತಿಂಡಿ ಮಣ್ಣಿ ಜೊತೆಗೆ ಜಿಲೇಬಿ, ಪಲಾವ್, ಕುಡಿಯುವ ತಂಬುಳಿ, ಮಿರ್ಚಿ ಬಜೆ, ಚಪಾತಿ, ಮೊಸರನ್ನ ಹೀಗೆ ಎಲ್ಲವೂ ತಯಾರಿ ಯ ನಂತರ ಸಂಕ್ರಾಂತಿ ಹಬ್ಬದ. ಎಳ್ಳು ಬೆಲ್ಲ ತಗೊಳ್ಳಿ ಒಳ್ಳೆ ಒಳ್ಳೆ ಮಾತಾಡಿ ಎನ್ನುತ್ತಾ ಪರಸ್ಪರ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡರು. ಎಲ್ಲರೂ ಊಟ ಮಾಡಿದರು. ಮಾತಿನಲ್ಲೇ ಮನೆ ಕಟ್ಟಿ ಸಂತೋಷ ಪಟ್ಟರೆ ಐಸ್ ಕ್ರೀಮ್ ತಿಂದು ಖುಶಿ ಪಟ್ಟರು.
ಈ ಸಂದರ್ಭದಲ್ಲಿ ನಂದಿಗದ್ದಾ ಗ್ರಾಮ ಪಂಚಾಯತ ಅಧ್ಯಕ್ಷ ಅರುಣ್ ದೇಸಾಯಿ, ಹಿರಿಯರಾದ ಸುಧಾಕರ ದೇಸಾಯಿ, ಟಿ ಎಸ್ ಎಸ್ ಸದಸ್ಯ ಸದಾಶಿವ ದೇಸಾಯಿ, ಸಪ್ತಸ್ವರ ಸಂಸ್ಥೆಯ ಅಧ್ಯಕ್ಷೆ ಸುಮಂಗಲಾ ದೇಸಾಯಿ, ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಸಹಕಾರಿ ಸಂಸ್ಥೆಯಸದಸ್ಯ ಶ್ರೀನಾಥ್ ದೇಸಾಯಿ ಸೇರಿದಂತೆ ಶೇವಾಳಿ ಕುಟುಂಬದ ಸದಸ್ಯರು ಮುದ್ದು ಮಕ್ಕಳು ಯುವಕರು ಯುವತಿಯರು ವನಭೋಜನದಲ್ಲಿ ಬಾಗವಹಿಸಿ ಸಂಕ್ರಾಂತಿ ಹಬ್ಬದ ಮೆರಗು ಹೆಚ್ಚಿಸಿದರು.ಈ ದಿನ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ ತಿಮ್ಮಪ್ಪ ದೇಸಾಯಿ ರಾಮಪಾಲ್ ಅವರು ಸೇರಿದ ಎಲ್ಲರಿಗೂ ಐಸ್ ಕ್ತಿಮ್ ಕೊಡಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
