ಸುದ್ಧಿಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಜಗಲಬೇಟ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿರುವ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಹಾಗೂ ಶಿಕ್ಷಕಿ ಸ್ಮಿತಾ ಜಾಧವ ದಂಪತಿಗಳ ಮಗಳಾದ ಮೌಲ್ಯ ಅನಿಲ ರಾಠೋಡ ಅವರು ಬಿಡಿಸಿದ ಪರಿಸರ ಮಾಲಿನ್ಯದ ದೃಶ್ಯವನ್ನು ಬಿಂಬಿಸುವ ಚಿತ್ರಕಲೆ. ಪ್ರಸ್ತುತ ಸನ್ನಿವೇಶದಲ್ಲಿ ಮಾಲಿನ್ಯದ ಸಮಸ್ಯೆಯು ಒಂದು ಗಂಭೀರ ಸಮಸ್ಯೆಯಾಗಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿ ಇಂತಹ ಗಂಭೀರ ವಿಷಯದ ಚಿತ್ರವನ್ನು ತಮ್ಮ ಅತ್ಯುತ್ತಮ ಚಿತ್ರಕಲೆಯ ಮೂಲಕ ಬಿಂಬಿಸಿದ ಕುಮಾರಿ ಮೌಲ್ಯ ಅನಿಲ ರಾಠೋಡ ಅವರ ಚಿತ್ರಕಲೆಗೆ ಕುಟುಂಬ ವರ್ಗದವರು,ಹಿತೈಷಿಗಳು,ಶಿಕ್ಷಕ ವೃಂದದವರು ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆಯನ್ನು ಚಿತ್ರಕಲೆಯ ವಿಭಾಗದಲ್ಲಿ ಮಾಡಲಿ ಎಂದು ಶುಭ ಹಾರೈಸಿದ್ದಾರೆ.