ಸುದ್ಧಿಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಬರ್ಚಿ ಕ್ರಾಸ್ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ಖಚಿತ ಮಾಹಿತಿ ಮೇರೆಗೆ ಬರ್ಚಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ, ಅವರು ಅಕ್ರಮವಾಗಿ ಮರಳು (ಉಸುಕು) ಸಾಗಿಸುವ ಟಿಪ್ಪರ್ ನ್ನು ವಶಪಡಿಸಿ ಕೊಂಡ ಘಟನೆ ನಡೆದಿದೆ .

ರಾತ್ರಿ ಸುಮಾರು 9 ಘಂಟೆಯ ವೇಳೆಗೆ ಮರಳು ತುಂಬಿಕೊಂಡು ಬಂದ ಟಿಪ್ಪರ್ ಉಂ ಔ9 U 3193( ಟಾ ಟಾ )ನ್ನು ತಡೆದು ನಿಲ್ಲಿಸಿ ಮರಳು ಸಾಗಾಟಕ್ಕೆ ಬೇಕಾದ ಪಾಸ್ ಪರ್ಮಿಟ್ ಕೇಳಿದಾಗ ಯಾವದೂ ಇಲ್ಲದ ಕಾರಣ ಚಾಲಕ ಶ್ಯಾಮ ಜೋನ್ ಮೆಂಡೋನ್ಸ ಮೇಲೆ ಕಾನೂನು ಕ್ರಮ ಕೈಕೊಳ್ಳಲಾಗಿದೆ.

ಜೋಯಿಡಾ ತಾಲೂಕಿನ ಸಿಂಗರ್ಗಾoವ ದ ವೈಜಗಾಂವ ದಿಂದ ದಾಂಡೇಲಿ ಗೆ ಈ ಮರಳು (ಉಸುಕು) ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಜಗಲ್ಬೇಟ್ ಎ ಸಿ ಎಫ್ ಅವರ ಮಾರ್ಗದರ್ಶನ ದಲ್ಲಿ ಬರ್ಚಿ ವಲಯ ಅರಣ್ಯಅಧಿಕಾರಿ ರಶ್ಮಿ ದೇಸಾಯಿ ಕಾನೂನು ಕ್ರಮ ಜರುಗಿಸಿದ್ದು, ಉಪ ವಲಯ ಅರಣ್ಯಅಧಿಕಾರಿ ಪ್ರಕಾಶ್ ಶೆಟ್ಟಿ, ಅಮಿತ್ ಕೆಳದಿ, ರಮೇಶ ಹಡಪದ್,ಮುತ್ತಪ್ಪ ತಬರಿ ಮತ್ತು ಸವಿತಾ ಬೂದಿಹಾಳ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.