ಸುದ್ದಿ ಕನ್ನಡ ವಾರ್ತೆ

ಜಿಲ್ಲೆಯ ಪ್ರಮುಖ ಜಾತ್ರೆ ಗಳಲ್ಲಿ ಒಂದಾದ ಮತ್ತು ಲಕ್ಷಾಂತರ ಜನರು ಸೇರುವ ಪ್ರಮುಖ ಗಂಡು ಮೆಟ್ಟಿನ ಜಾತ್ರೆ ಎಂದೇ ಕರೆಯಲ್ಪಡುವ ಉಳವಿಯ ಶ್ರೀ ಚನ್ನ ಬಸವಣ್ಣನ ಜಾತ್ರೆ ಇದೇ ತಿಂಗಳ 25 ರ ರಥ ಸಪ್ತಮಿ ಯಿಂದ ಆರಂಭ ವಾಗಿ ಪೆಬ್ರುವರಿ 5 ನೆ ತಾರೀಕಿನ ವರೆಗೆ ನಡೆಯಲಿದೆ ಪೆಬ್ರುವರಿ 3 ರಂದು ಮಘಾ ನಕ್ಷತ್ರ ದ ಶುಭ ಸಂದರ್ಭದಲ್ಲಿ ಮದ್ಯಾಹ್ನ 4ಘಂಟೆಗೆ ಮಹಾ ರಥೋತ್ಸವ ಲಕ್ಷಾಂತರ ಜನರ ಸಮ್ಮುಖದಲ್ಲಿ ನಡೆಯಲಿದೆ.

ರಾಜ್ಯದ ಬೀದರ್ ವಿಜಾಪುರ್, ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ, ಧಾರವಾಡ,ಕಲಬುರಗಿ ಸೇರಿದಂತೆ. ಹೊರರಾಜ್ಯ ಗಳಿಂದಲೂ ಉಳವಿ ಜಾತ್ರೆಗೆ ಬರಲಿದ್ದಾರೆ, ಒಂದು ವಾರಗಳ ಕಾಲ ಶ್ರೀ ಕ್ಷೆತ್ರ ಉಳವಿಯಲ್ಲಿ ಲಕ್ಷಾಂತರ ಜನರು ಸೇರುವ ಕಾರಣ ಉಳವಿ ಗ್ರಾಮ ಪಂಚಾಯತ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸಕಲ ಸಿದ್ಧತೆ ಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ತಾಲೂಕಾ ಆಡಳಿತ ಮತ್ತು ಜಿಲ್ಲಾ ಆಡಳಿತಗಳು ಸೇರಿ ಸಭೆಯನ್ನು ನಡೆಸಿವೆ . ಸಾರಿಗೆ, ವಿದ್ಯುತ್, ಕುಡಿಯುವ ನೀರು, ಪಾರ್ಕಿಂಗ್ ಪರಿಹಾರ ವಸತಿ, ಇನ್ನಿತರ ಸಮಸ್ಯೆಗಳು ಸಭೆಯಲ್ಲಿ ಚರ್ಚೆ ಯಾಗಿದ್ದು ಚಕ್ಕಡಿ ಗಾಡಿ ಗಳಲ್ಲಿ ಭಕ್ತರು ಎತ್ತು ಗಳನ್ನು ಕಟ್ಟಿಕೊಂಡು ಬರುತ್ತಿರುವ ಕಾರಣ ಸಾಕಷ್ಟು ಪಶುವೈದ್ಯರು ಕೂಡ ಜಾತ್ರೆಯಲ್ಲಿ ಕಾರ್ಯ ನಿರ್ವಹಿಸಲು ಕೇಳಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ .

ಅರಣ್ಯ ಇಲಾಖೆ ಕೂಡ ಜಾತ್ರೆಯ ಸಿದ್ಧತೆಗೆ ತುಂಬಾ ಕಾಳಜಿಯಿಂದ ಕೆಲಸ ಮಾಡುತ್ತಿರುವದು ಕಂಡು ಬರುತ್ತಿದೆ. ಒಟ್ಟಾರೆ ಜನೆವರಿ 25.ರಿಂದ ಫೇಬ್ರುವರಿ 5 ರ ವರೆಗೆ ಮಲೆನಾಡಿನಲ್ಲಿ ಬಯಲು ಸೀಮೆಯ ಜಾತ್ರೆಯ ರಂಗು ಧೂಳೆಬ್ಬಿಸಲಿದೆ.