ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಶ್ರೀ ಸಿದ್ದೇಶ್ವರ ಕ್ರೀಡಾ ಸಂಘ ಡೇರಿಯಾ ವತಿಯಿಂದ (ಕಿರವತ್ತಿ ಕ್ರೀಡಾಂಗಣ)ದಲ್ಲಿ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರಬಾವಿ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ,ಕುಂಡಲ ತಂಡವು (ರನ್ನರ್ ಅಪ್) ದ್ವಿತೀಯ ಸ್ಥಾನ ಅತಿಥೇಯ ಡೇರಿಯಾ ತಂಡವು ತೃತೀಯ ಸ್ಥಾನ ಪಡೆಯಿತು.

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಗ್ರಾಮೀಣ ತಂಡಗಳು ಭಾಗವಹಿಸಿದ್ದವು. ಸಂಘಟಕರು ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಮಾಡಿದ್ದರು.ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ನಗರಬಾವಿ ಹಾಗೂ ಕುಂಡಲ ತಂಡಗಳ ನಡುವಿನ ಪಂದ್ಯದಲ್ಲಿ ನಗರಬಾವಿ ತಂಡವು ಕುಂಡಲ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.ಕುಂಡಲ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ (ರನ್ನರ್ ಅಪ್ )ದ್ವಿತೀಯ ಸ್ಥಾನ ಪಡೆಯಿತು.ಅತಿಥೇಯ ಡೇರಿಯಾ ತಂಡವು ತೃತೀಯ ಸ್ಥಾನ ಪಡೆಯಿತು. ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ನಗರಬಾವಿಯ ತಂಡದವರಿಗೆ ಊರಿನ ಗ್ರಾಮಸ್ಥರು,ಕ್ರೀಡಾಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ. ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಡೇರಿಯಾ ಗ್ರಾಮದ ಮಿರಾಶಿ ತುಳಸಿದಾಸ ಡೇರೆಕರ,ರವಿಶಂಕರ ಡೇರೆಕರ, ಮುರಳಿಧರ ಡೇರೆಕರ, ಮಂಜುನಾಥ ವೇಳಿಪ ಕುಂಡಲ,ನಾನಾ ಡೇರೆಕರ,ಅಖಿಲ್ ಡೇರೆಕರ,ದೀಪಕ ಡೇರೆಕರ,ನಿವಾಸ ಡೇರೆಕರ,ರಾಕೇಶ ಡೇರೆಕರ,ನರೇಶ ಡೇರೆಕರ,ದೀಲಿಪ ಡೇರೆಕರ, ಹೃಷಿಕೇಶ ಡೇರೆಕರ,ಮನೋಜ ಡೇರೆಕರ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.