ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ತಾಲೂಕಿನ ಅಣಶಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನುಜ್ಜಿ ಗ್ರಾಮದ ಶ್ರೀ ರಾಮಲಿಂಗ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಜನೇವರಿ 15 ರಂದು ನಡೆಯಲಿದೆ.

ಅಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.30 ವರೆಗೆ ದೇವರ ಅಭೀಷೇಕ, ಅಲಂಕಾರ, ಪೂಜೆ ನಡೆಯಲಿದೆ. ನಂತರ ಸಾತೇರಿ ದೇವಿಯ ಪೂಜೆ ಮತ್ತು ಉಡಿ ತುಂಬುವ ಕಾರ್ಯ ಕ್ರಮ ನಡೆಯಲಿದೆ.
ಸಂಜೆ 4.00 ಗಂಟೆಗೆ ದೇವರ ಪಲ್ಲಕ್ಕಿ ಉತ್ಸವ ಮತ್ತು ವನ ಪೂಜೆ ನಡೆಯಲಿದೆ. ನಂತರ ಅನ್ನ ಪ್ರಸಾದ ವಿತರಣೆ, ರಾತ್ರಿ 10.00 ಗಂಟೆಗೆ ಸವಾಲ್ ಕಾರ್ಯಕ್ರಮ ನಡೆಯಲಿದೆ. ನಂತರ ಸ್ಥಳೀಯ ಕಲಾವಿದರಿಂದ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಮರು ದಿನ ಬೆಳಿಗ್ಗೆ 6.00 ಗಂಟೆಗೆ ಹೆಣ್ಣು ಮಕ್ಕಳ ದಿವಜ್ (ದೀಪೋತ್ಸವ) ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ.
ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಅಧ್ಯಕ್ಷರಾದ ಗಜಾನನ ದೇಸಾಯಿ ತಿಳಿಸಿದ್ದಾರೆ.

ಈ ಜಾತ್ರೆಯೊಂದಿಗೆ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಜಾತ್ರೋತ್ಸವಗಳಿಗೆ ವಿಧ್ಯುಕ್ತ ಚಾಲನೆ ನೀಡಿದಂತೆ ಆಗಲಿದೆ.