ಸುದ್ಧಿಕನ್ನಡ ವಾರ್ತೆ
ಶಿರಸಿ: ಉತ್ತರಕನ್ನಡ ಜಿಲ್ಲೆಯು ಈಗಾಗಲೇ ಹಲವು ಪ್ರಕೃತಿ ವಿಕೋಪಗಳನ್ನು ಎದುರಿಸಿದೆ. ಇದರಿಂದಾಗಿ ಉತ್ತಕನ್ನಡ ಜಿಲ್ಲೆಯ “ಧಾರಣಾ ಸಾಮಥ್ರ್ಯದ” ಕುರಿತು ವೈಜ್ಞಾನಿಕ ಅಧ್ಯಯನ ನಡೆಯಬೇಕು ಎಂದು ನಾನು ಮೊದಲು ಒತ್ತಾಯಿಸಿದ್ದು. ನಾನು ಮಾತನಾಡಬೇಕಾದ ಸಂದರ್ಭದ ಬಂದಾಗಲೆಲ್ಲ ನಾನು ಈ ಕುರಿತು ಧ್ವನಿಯೆತ್ತುತ್ತಲೇ ಇದ್ದೇನೆ. ಈ ಹೋರಾಟ ಕೇವಲ ಇಂದು ನಮ್ಮ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಇದು ನಮ್ಮ ಮುಂದಿನ ಪೀಳೀಗೆಯ ರಕ್ಷಣೆಗಾಗಿ ನಾವು ಸೇರಿಸುವ ವೇದಿಕೆಯಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನುಡಿದರು.

ಉತ್ತರಕನ್ನಡದ ಶಿರಸಿ ನಗರದ ಎಂಇಎಸ್ ಕಾಲೇಜು ಮೈದಾನದಲ್ಲಿ ಅಘನಾಶಿನಿ -ಬೇಡ್ತಿ ನದಿ ತಿರುವು ಯೋಜನೆ ವಿರೋಧಿಸಿ ಭಾನುವಾರ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

1990 ರ ದಶಕದಿಂದಲೂ ಈ ಯೋಜನೆಯ ವಿಚಾರದಲ್ಲಿ ನಾನು ಶ್ರೀಗಳ ಜೊತೆಗೆ ನಿಂತಿದ್ದೇನೆ. ಅಂದಿನಿಂದ ಇಂದಿನ ವರೆಗೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ನನ್ನ ಮಾತಿಗೆ ನಾನು ಬದ್ಧನಾಗಿದ್ದೇನೆ. ನೀರನ್ನು ನಾವು ಬೆಂಕಿ ಆರಿಸಲು ನಾವು ಬಳಸುತ್ತೇವೆ. ಆದರೆ ಅದೇ ನೀರು ಇಂದು ನಮಗೆ ಬೆಂಕಿಯ ಹಾಗೆ ಕಾಡುತ್ತಿದೆ. ಜಿಲ್ಲೆಯ ಪಾಲಿಗೆ ಮಾರಕವಾಗಿರುವ ಯಾವುದೇ ಯೋಜನೆಗಳು ಜಿಲ್ಲೆಗೆ ಬರುವುದು ಬೇಡ ಎಂದು ಸಂಸದ ಕಾಗೇರಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಆಘ್ರಹಿಸಿದರು.

1990 ರ ದಶಕದಿಂದಲೂ ಈ ಯೋಜನೆಯ ವಿಚಾರದಲ್ಲಿ ನಾನು ಶ್ರೀಗಳ ಜೊತೆಗೆ ನಿಂತಿದ್ದೇನೆ. ನನ್ನ ನಿಲುವಿನಲ್ಲಿ ಅಂದಿನಿಂದ ಇಂದಿನ ವರೆಗೂ ಯಾವುದೇ ಬದಲಾವಣೆಯಿಲ್ಲ. ಇದರಿಂದಾಗಿ ಹಿಂದೆ ಮಾತನಾಡಿದವರ ಕುರಿತು ನಾನು ಟೀಕೆ ಮಾಡಲು ಹೋಗುವುದಿಲ್ಲ ಎಂದು ಸಂಸದ ಕಾಂಗೇರಿ ನುಡಿದರು. ಮುಂದೆಯೂ ಕೂಡ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿಯ ಜೊತೆಗೆ ನಾನಿದ್ದೇನೆ ಹಾಗೂ ಶ್ರೀಗಳ ಮಾರ್ಗದರ್ಶನದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ನಡೆಸೋಣ ಎಂದರು.