ಸುದ್ದಿ ಕನ್ನಡ ವಾರ್ತೆ
ಗೋಕರ್ಣ: ಕ್ರಿಕೆಟ್‌ನಲ್ಲಿ ಆರ್‌ಸಿಬಿ ತಂಡ
ತನ್ನದೇ ಆದ ವರ್ಚಸ್ಸನ್ನು ಹೊಂದಿದ್ದು, ಈ ತಂಡಕ್ಕೆ ಗೋಕರ್ಣದ ರಥಬೀದಿಯಲ್ಲಿರುವ ಜಂಭೆ ಮನೆತನದವಳಾದ ಪ್ರತ್ಯೂಷ ಜಂಭೆ ಆಯ್ಕೆಯಾಗಿರುವುದು ಸಂಭ್ರಮಕ್ಕೆ ಕಾರಣವಾಗಿದೆ.
ಈಕೆಯು 14 ನೇ
ವಯಸ್ಸಿನಿಂದಲೇ ಕ್ರಿಕೆಟ್ ಆಡಲು ಆರಂಭಿಸಿದ್ದಳು. ನಂತರ ಹಂತ ಹಂತವಾಗಿ ಬೆಳೆದು ರಾಜ್ಯಮಟ್ಟದ
ಪಂದ್ಯಾವಳಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಳು.
ಉತ್ತಮ ಆಟಗಾರ್ತಿಯಾಗಿರುವ ಈಕೆಯು ವಿಕೇಟ್ ಕೀಪರ್ ಆಗಿಯೂ ಕೂಡ ಸೈ ಎನಿಸಿಕೊಂಡಿದ್ದಾಳೆ. ಕು.ಜಂಭೆ ಮತ್ತು ಸುಜಾತಾ ಇವರ ಪುತ್ರಿಯಾಗಿರುವ ಪ್ರತ್ಯೂಷ ಸದ್ಯ ಈಕೆಯು ಬೆಂಗಳೂರಿನಲ್ಲಿ ವಾಸ್ತವ್ಯ ಮಾಡುತ್ತಿದ್ದಾಳೆ.
ಈಗ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಗೋಕರ್ಣ, ಜಿಲ್ಲೆಗೆ,ರಾಜ್ಯಕ್ಕೆ ಕೀರ್ತಿಯನ್ನು ತಂದಂತಾಗಿದೆ. ಮುಂದಿನ ದಿನಗಳಲ್ಲಿ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಲಿ ಎನ್ನುವುದು ಸ್ಥಳೀಯರ ಹಾರೈಕೆ,ಆಶಯವಾಗಿದೆ.
