ಸುದ್ದಿ ಕನ್ನಡ ವಾರ್ತೆ

ತಾಲೂಕಿನ ಪ್ರಮುಖ ಕೇಂದ್ರ ವಾದ ಸಂತ್ರಿ ಗ್ರಾಮ ದ ಗ್ರಾಮ ದೇವರಾದ ನಾಗನಾಥ ದೇವರ ಜಾತ್ರೆ ಬರುವ ದಿನಾಂಕ 23 ರಂದು ಶುಕ್ರವಾರ ನಡೆಯಲಿದೆ ಅಂದು ಬೆಳಿಗ್ಗೆ ಯಿಂದ ಧಾರ್ಮಿಕ ವಿಧಿ ವಿಧಾನ ಗಳು ನಡೆಯಲಿವೆ. ಮದ್ಯಾಹ್ನ ಶ್ರೀ ದೇವರ ಮಹಾ ಪೂಜೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ

ನಂತರ ನಿರಂತರ ದೇವರ ದರ್ಶನ ನಡೆದು ರಾತ್ರಿ 8 30 ರಿಂದ ಶ್ರೀ ದೇವರ ಪಲಾವಳಿ ಗಳ ಸವಾಲು ನಡೆದು ನಂತರ ಸತ್ಯವಂತನ ಮನೆ ಸಮಾಧಿ ಎಂಬ ನಾಟಕ ಇಡೀ ರಾತ್ರಿ ನಡೆಯ ಲಿದೆ ನಾಟಕ ವನ್ನು ಶಿಕ್ಷಕರ ಸಂಘದ ಅಧ್ಯಕ್ಷ ಯಶವಂತ ನಾಯಕ ಅವರು ನಿರ್ದೇಶಸುತ್ತಿದ್ದು ನುರಿತ ಕಲಾವಿದರು ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂದು ನಾಗನಾಥ ನಾಟ್ಯ ಮಂಡಳಿ ತಿಳಿಸಿದೆ. ಶನಿವಾರ ಬೆಳಿಗ್ಗೆ ಶ್ರೀ ದೇವರ ಧಹಿಕಾಲ ಉತ್ಸವ ಕೂಡ ನಡೆಯಲಿದೆ ಎಂದು ಆಡಳಿತ ಸಮೀತಿ ತಿಳಿಸಿದ್ದು, ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾಗಲು ವಿನಂತಿಸಿದ್ದಾರೆ..