ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಹಣಜುಣದಲ್ಲಿರುವ ಬರ್ಚ ಬಾಯ್ ರೋಮಿಯೊಲೆನ್ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಗಢದಲ್ಲಿ 25 ಜನ ಸಾವನ್ನಪ್ಪಿದ ಭೀಕರ ಘಟನೆ ನಡೆದಿತ್ತು. ಈ ಘಟನೆಯ ತನಿಖೆ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದಂತಿದೆ. ಈ ದುರ್ಘಟನೆಯ ನಂತರ ಪರಾರಿಯಾಗಿದ್ದ ನೈಟ್ ಕ್ಲಬ್ ಮ್ಯಾನೇಜರ್ ವಿಜಯ್ ಕುಮಾರ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಗೋವಾದ ಬರ್ಚಬಾಯ್ ರೋಮಿಯೊ ಲೆನ್ ನೈಟ್ ಕ್ಲಬ್ ದುರ್ಘಟನೆಯ ನಂತರ ಆಪರೇಶನಲ್ ಮ್ಯಾನೇಜರ್ ಎಂದು ಕೆಲಸ ನಿರ್ವಹಿಸುತ್ತಿದ್ದ ಝಾರ್ಖಂಡ್ ಮೂಲದ ವಿಜಯಕುಮಾರ್ ಸಿಂಗ್ (38) ಎಂಬ ಆರೋಪಿಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಈ ಭೀಕರ ಘಟನೆಗೆ ಹೊಸ ತಿರುವು ಲಭಿಸಿದಂತಾಗಿದೆ. ಈ ಆರೋಪಿ ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ. ಪೋಲಿಸರು ತಪಾಸಣೆ ನಡೆಸಲು ಆರಂಭಿಸಿದ ನಂತರ ಈತ ಗೋವಾದಲ್ಲಿ ಇಲ್ಲ ಎಂಬುದು ಸ್ಪಷ್ಟವಾಗಿತ್ತು.

ನ್ಯಾನೇಜರ್ ವಿಜಯ್ ಕುಮಾರ್ ಈತನನ್ನು ಬಂಧಿಸಲು ಪೋಲಿಸರು ಕಾರ್ಯಾಚರಣೆ ಕೈಗೆತ್ತಿಕೊಂಡ ನಂತರ ಈತ ಗೋವಾದಿಂದ ನಾಪತ್ತೆಯಾಗಿರುವುದು ಕಂಡುಬಂತು. ಈತನ ಮೊಬೈಲ್ ಲೊಕೇಶನ್ ಝಾರ್ಖಂಡ್ ನಲ್ಲಿ ತೋರಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಝಾರ್ಖಂಡ್ ನಲ್ಲಿ ಶೋಧ ಕಾರ್ಯ ನಡೆಸಲು ಪೋಲಿಸರ ವಿಶೇಷ ತಂಡ ರಚಿಸಲಾಗಿತ್ತು. ಪೋಲಿಸರ ವಿಶೇಷ ತಂಡ ಝಾರ್ಖಂಡ್ ಸ್ಥಳೀಯ ಪೋಲಿಸರ ಸಹಾಯದಿಂದ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.
ವಿಜಯ್ ಕುಮಾರ್ ಸಿಂಗ್ ಈತ ನೈಟ್ ಕ್ಲಬ್ ಆಪರೇಶನಲ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಇದರಿಂದಾಗಿ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿ ಈತನ ಮೇಲಿತ್ತು. ಅಗ್ನಿ ಅವಗಢದ ಸಂದರ್ಭದಲ್ಲಿ ಏನಾಗಿತ್ತು…? ಸುರಕ್ಷತೆಯ ಉಲ್ಲಂಘನೆಯಾಗಿದೆಯೇ…? ಪ್ರಕರಣದ ಈ ಎಲ್ಲ ವಿಚಾರಣೆಯ ಹಿನ್ನೆಲೆಯಲ್ಲಿ ಮ್ಯಾನೆಜರ್ ಬಂಧನ ಅತ್ಯಂತ ಮಹತ್ವ ಪಡೆದುಕೊಂಡಿದೆ.