ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿಯಲ್ಲಿ ಸತತ 16 ನೇ ವರ್ಷದ ಶ್ರೀ ಸೋಮೇಶ್ವರ ಯುವ ಒಕ್ಕೂಟ ಅವುರ್ಲಿ ಹಾಗೂ ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಇದೇ ಬರುವ ದಿನಾಂಕ :24/01/2026 ರಿಂದ 26/01/2026 ರವರೆಗೆ ಆಹ್ವಾನಿತ ತಂಡಗಳ ಗ್ರಾಮೀಣ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶ್ರೀ ಸೋಮೇಶ್ವರ ಕ್ರೀಡಾಂಗಣ,(ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರಿಗೆ) ಅವುರ್ಲಿಯಲ್ಲಿ ಆಯೋಜಿಸಲಾಗಿದೆ.

ಉದ್ಘಾಟನಾ ಸಮಾರಂಭವು ಗಣ್ಯರು,ಕ್ರೀಡಾಪ್ರೇಮಿಗಳು ಹಾಗೂ ಊರ ನಾಗರೀಕರ ಸಮ್ಮುಖದಲ್ಲಿ ಶನಿವಾರ ದಿನಾಂಕ :24/01/2026 ರಂದು ಬೆಳಿಗ್ಗೆ 8:30 ಘಂಟೆಗೆ ಜರಗುವುದು. ಪಂದ್ಯಾವಳಿಯ ಸಮಾರೋಪ ಸಮಾರಂಭವು ಸೋಮವಾರ ದಿನಾಂಕ: 26/01/2026 ರಂದು ಸಂಜೆ 4:00 ಘಂಟೆಗೆ ಜರಗುವುದು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಆಟಗಾರರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಸಂಘಟಕರಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ.

ಸಹೃದಯ ಕ್ರೀಡಾ ಪ್ರೇಮಿಗಳಾದ ತಾವು ಈ ಪಂದ್ಯಾವಳಿಯಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಲ್ಲ ರೀತಿಯ ತನು-ಮನ-ಧನದ ಪ್ರೋತ್ಸಾಹ ನೀಡಿ ಪಂದ್ಯಾವಳಿಯನ್ನು ಯಶಸ್ವಿ ಗೊಳಿಸಿಕೊಡಬೇಕೆಂದು ಕಾರ್ಯಕ್ರಮದ ಸಂಘಟಕರಾದ ಅನಿಲ ಶೇಟಕರ್, ದಿಲೀಪ ದೇವದಾಸ,ಸಂಜಯ ದೇಸಾಯಿ,ಶೇಖರ ಪಾಡಕರ ಮಾಧ್ಯಮದ ಮೂಲಕ ವಿನಂತಿಸಿಕೊಂಡಿದ್ದಾರೆ.