ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಿಚೋಲಿ ಪೋಲಿಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಅಸ್ನೋಡಾ ಜಂಕ್ಷನ್ ಬಳಿ ಬೆಕ್ ನಲ್ಲಿ ಸಂಶಯಾಸ್ಪದವಾಗಿ ಓಡಾಟ ನಡೆಸುತ್ತಿದ್ದ ಇಬ್ಬರನ್ನು ಬೆನ್ನಟ್ಟಿ ಹೋಗಿ ಇಬ್ಬರನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.

ಲಭ್ಯವಾದ ಮಾಹಿತಿಯ ಅನುಸಾರ- ಗುಲಾಮ್ ಶಿವರಾಜ್ ಅಬ್ಬಾಸ್ ಶಿವರಾಜ್ (40, ಸಾಂಗಲಿ-ಮಹಾರಾಷ್ಟ್ರ) ಹಾಗೂ ಅಸದುಲ್ಲಾ ಅಫಜಲ್ ಅಲಿ ಖಾನ್ (35, ಬೀದರ್ ಮಹಾರಾಷ್ಟ್ರ) ಈ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ. ಈ ಇಬ್ಬರು ಬಂಧಿತರು ಡಿಸೆಂಬರ್ 20 ರಂದು ಒಬ್ಬ ಮಹಿಳೆಯ ಮಂಗಳಸೂತ್ರ ಕಳ್ಳತನ ನಡೆಸುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಅಸ್ನೊಡಾ ಜಂಕ್ಷನ್ ಬಳಿ ಹೊಂಡಾ ಶಾಯಿನ್ ಮೋಟರಸೈಕಲ್ ನಿಂದ ಸಂಶಯಾಸ್ಪದವಾಗಿ ಓಡಾಟ ನಡೆಸುತ್ತಿದ್ದರು. ಇಬ್ಬರೂ ವೃದ್ಧ ಮಹಿಳೆಯನ್ನು ನಿಲ್ಲಿಸಿ ಮೋಸ ಮಾಡಲು ಯತ್ನಿಸುತ್ತಿದ್ದರು. ಪೋಲಿಸ್ ನಿರೀಕ್ಷಕ ಎಸ್ ಕಾಮತ್ ಹಾಗೂ ಕಾನ್ಸ ಟೆಬಲ್ ದಯೇಶ್ ಖಾಂಡೆಪಾರಕರ್ ರವರು ಇವರಿಬ್ಬರನ್ನು ತಡೆದು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಅವರಿಬ್ಬರೂ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರು. ಪೋಲಿಸರು ಅವರನ್ನು ಓವರ್ ಟೇಕ್ ಮಾಡಿ ಬಂಧಿಸಿದರು. ಇವರಿಬ್ಬರ ಬಳಿಯಿಂದ ನಕಲಿ ಪೋಲಿಸ್ ಐಡಿ ಕಾರ್ಡ, ಫೇಸ್ ಮಾಸ್ಕ, ಕಲ್ಲು ಹಾಗೂ ಗಾಜಿನ ಮೀನುಗಳನ್ನು ವಷಪಡಿಸಿಕೊಳ್ಳಲಾಗಿದೆ.

ಬಂಧಿತರಿಂದ ವಷಪಡಿಸಿಕೊಂಡ ಬೈಕ್ ಕೂಡ ಕಳ್ಳತನದ್ದೇ ಆಗಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಪೋಲಿಸ್ ಉಪನಿರೀಕ್ಷಕ ಎಸ್.ಕಾಮತ್ ರವರ ನೇತೃತ್ವದಲ್ಲಿ ವಿಜಯ್ ರಾಣೆ ರವರ ತಂಡ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.