ಸುದ್ದಿ ಕನ್ನಡ ವಾರ್ತೆ

ಜೋಯಿಡಾ ದಲ್ಲಿ ಗುರುವಾರ ಯಲ್ಲಾಪುರ ತಾಲೂಕಿನ ಕಳಚೆಯ *ಸಹ್ಯಾದ್ರಿ ವಿವಿದ್ದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಳಚೆ* ಇದರ ಅಧ್ಯಕ್ಷ ರಾದ ಉಮಾಮಹೇಶ್ವರ ಭಾಗ್ವತ ಅವರು ತಮ್ಮವರೊಂದಿಗೆ ಶಾಸಕರಾದ ಆರ್ ವಿ ದೇಶಪಾಂಡೆ ಅವರನ್ನು ಭೇಟಿಯಾಗಿದ್ದರು.

ಈ ಸಂದರ್ಭದಲ್ಲಿ ತಮ್ಮಕೃಷಿ ಸಹಕಾರಿ ಸಂಘ ದ ಬಗ್ಗೆ. ವಿವರಿಸಿ ನೂತನವಾಗಿ ಜೊಯಿಡಾದಲ್ಲಿ ತಮ್ಮ ಸಂಘ ದ ವ್ಯಾಪಾರಿ ಕೇಂದ್ರವನ್ನು ತೆರೆಯುತ್ತಿರುವ ಬಗ್ಗೆ ತಿಳಿಸಿದರು ಕರ್ನಾಟಕ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್. ವಿ. ದೇಶಪಾಂಡೆ ಅವರ ಸಹಕಾರ ಹಾಗೂ ಮಾರ್ಗದರ್ಶನವನ್ನು ಕೋರಿದರು.ಆಗ ದೇಶಪಾಂಡೆ ಅವರು ನೀವು ವ್ಯಾಪಾರಿ ಕೇಂದ್ರ ತೆರೆಯುತ್ತಿರುವುದು ಉತ್ತಮವಾದ ಕಾರ್ಯ ವಾಗಿದ್ದು ಇದರಿಂದ ರೈತರಿಗೆ ಅನುಕೂಲ ವಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು..

ಈ ಸಂದರ್ಭದಲ್ಲಿ ಸಹ್ಯಾದ್ರಿಸಹಕಾರಿ ಸಂಘದ
ಅಧ್ಯಕ್ಷರಾದ ಉಮಾಮಹೇಶ್ವರ ಭಾಗ್ವತರ ಜೊತೆಗೆ ನಿರ್ದೇಶಕರಾದ ರಾಘವೇಂದ್ರ ಭಟ್ಟ ಸೂತ್ರೆ ಹಾಗೂ ಮುಖ್ಯಕಾರ್ಯನಿರ್ವಾಹಕರಾದ ದತ್ತಾತ್ರಯ ಹೆಗಡೆ ಉಪಸ್ಥಿತರಿದ್ದರು.