ಸುದ್ದಿ ಕನ್ನಡ ವಾರ್ತೆ
ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿರುವ “ಎಲೆಚುಕ್ಕಿ ಹಾಗೂ ಹಳದಿ ರೋಗ” ವನ್ನು ತಡೆಗಟ್ಟಲು
ಬಹುಮುಖ್ಯವಾಗಿ ರೈತರು ಅನುಸರಿಸಬೇಕಾದ ಕ್ರಮಗಳು 👇
🔹ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮರಗಳಿಗೆ ಸರಿಯಾದ ಪೋಷಕಾಂಶವುಳ್ಳ ಆಹಾರ ನೀಡುವುದು.
🔹ರೋಗವನ್ನು ತಡೆಗಟ್ಟಲು ಪೊಟ್ಯಾಷ್ ಗೊಬ್ಬರ ಅತೀ ಮುಖ್ಯ. ಪ್ರತಿ ಮರಕ್ಕೆ ಶಿಫಾರಸು ಮಾಡಿದ ಪ್ರಮಾಣದಲ್ಲಿ ಪೊಟ್ಯಾಷ್ ನೀಡುವುದರಿಂದ ಮರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
🔹ಎಲೆಚುಕ್ಕಿ ರೋಗದ ಕಣಗಳು ಗಾಳಿಯಲ್ಲಿ ಹರಡುವುದರಿಂದ ತೋಟದಲ್ಲಿ ಸಿಂಪಡಣೆ ಮಾಡುವಾಗ ಅಕ್ಕಪಕ್ಕದ ತೋಟದ ರೈತರೂ ಕೂಡ ಒಟ್ಟಾಗಿ ಸಿಂಪಡಣೆ ಮಾಡಿದರೆ ರೋಗ ಹರಡುವುದನ್ನು ಸಮರ್ಥವಾಗಿ ತಡೆಯಬಹುದು.
🔹ಎಲೆಚುಕ್ಕಿ ರೋಗಕ್ಕೆ ಗೊಬ್ಬರ ಹಾಕುವಾಗ ವಿಶೇಷವಾಗಿ ಪೊಟ್ಯಾಷ್ ಮತ್ತು ಮ್ಯಾಗ್ನೇಷಿಯಂ ಸಲ್ಫೇಟ್ ಅನ್ನು ಒಂದೇ ಬಾರಿ ನೀಡದೇ, ಕನಿಷ್ಠ 15-20 ದಿನಗಳ ಅಂತರ ಕಾಯ್ದುಕೊಳ್ಳಬೇಕು.
🔹ತೋಟದಲ್ಲಿ ಅತಿಯಾದ ನೆರಳಿದ್ದರೆ ಅಥವಾ ಅಂತರ ಬೆಳೆಗಳು ದಟ್ಟವಾಗಿದ್ದರೆ, ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ಸೂರ್ಯನ ಬೆಳಕು ಮತ್ತು ಗಾಳಿ ಮರಗಳ ನಡುವೆ ಆಡುವಂತೆ ಮಾಡಬೇಕು. ತೇವಾಂಶ ಹೆಚ್ಚಾದಷ್ಟೂ ರೋಗದ ತೀವ್ರತೆ ಹೆಚ್ಚುತ್ತದೆ.
🔹ಮಣ್ಣಿನ ಹುಳಿ ಅಂಶವನ್ನು (Acidity) ಕಡಿಮೆ ಮಾಡಲು ಪ್ರತಿ ಮರಕ್ಕೆ 250-500 ಗ್ರಾಂ ನಷ್ಟು ಕೃಷಿ ಸುಣ್ಣ ಅಥವಾ ಡೋಲೋಮೈಟ್ ನೀಡಬೇಕು.
🔹ಮ್ಯಾಗ್ನೇಷಿಯಂ ಸಲ್ಫೇಟ್, ಬೋರಾನ್ ಮತ್ತು ಸತುವಿನ (Zinc) ಕೊರತೆ ಉಂಟಾಗದಂತೆ ನೋಡಿಕೊಂಡರೆ ಎಲೆಗಳು ಹಸಿರಾಗಿರಲು ಮತ್ತು ಗಟ್ಟಿಯಾಗಿರಲು ಸಹಕಾರಿಯಾಗಲಿದೆ.
🔹ಅತಿಯಾದ ಮಳೆಯಿಂದಾಗಿ ತೋಟದಲ್ಲಿ ನೀರು ನಿಲ್ಲಬಾರದು. ನೀರು ಸರಾಗವಾಗಿ ಹರಿದು ಹೋಗಲು ಬಸಿಗಾಲುವೆಗಳನ್ನು (Drainage channels) ಸರಿಯಾಗಿ ನಿರ್ವಹಿಸುವುದು.
🔹 ಶೇ.1ರಷ್ಟು ಬೋರ್ಡೋ ದ್ರಾವಣವನ್ನು ಅಡಿಕೆ ಗೊನೆಗಳಿಗೆ ಮಾತ್ರವಲ್ಲದೆ, ಪೀಡಿತ ಸೋಗೆಗಳಿಗೂ (ಎಲೆಗಳಿಗೂ) ಸಿಂಪಡಿಸುವುದು.
🔹ರೋಗ ತೀವ್ರವಾಗಿದ್ದರೆ ‘ಹೆಕ್ಸಾಕೋನಾಜೋಲ್’ ಅಥವಾ ‘ಪ್ರೊಪಿಕೋನಾಜೋಲ್’ ನಂತಹ ಶಿಲೀಂಧ್ರನಾಶಕಗಳನ್ನು (1 ಲೀಟರ್ ನೀರಿಗೆ 1 ಮಿ.ಲೀ) ಬೆರೆಸಿ ಸಿಂಪಡಿಸುವುದು.
🔹ಯಾವುದೇ ಔಷಧ ಸಿಂಪಡಿಸುವಾಗ ಅದರ ಜೊತೆಗೆ ಕಡ್ಡಾಯವಾಗಿ ಅಂಟು ದ್ರಾವಣವನ್ನು ಸೇರಿಸುವುದು.
(ಸುದ್ದಿ ಸಂಗ್ರಹ)
