ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ಸರ್ಕಾರವು ರಾಜ್ಯದಲ್ಲಿನ ಸರ್ಕಾರಿ ಕಾರ್ಯಾಲಯದಲ್ಲಿ ಕೆಲಸದ ಸಂದರ್ಭದಲ್ಲಿ ಹುಟ್ಟುಹಬ್ಬ, ಬೀಳ್ಕೊಡುಗೆ ಸಮಾರಂಭ, ಇತರ ಖಾಸಗಿ ಕಾರ್ಯಕ್ರಮ ಆಯೋಜಿಸಲು ಸಂಪೂರ್ಣವಾಗಿ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಕಾರ್ಯಾಲಯಲ್ಲಿ ಕೆಲಸದ ಸಮಯ ಹಾಗೂ ಜಾಗವು ಅಧೀಕೃತ ಕಾರ್ಯಕ್ರಮಕ್ಕೆ ಮಾತ್ರ ಬಳಕೆಯಾಗಬೇಕು ಎಂದು ಗೋವಾ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಹಲವು ಬಾರಿ ಸರ್ಕಾರಿ ಕಾರ್ಯಾಲಯದಲ್ಲಿ ನೌಕರರ ಹುಟ್ಟುಹಬ್ಬ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದರಿಂದಾಗಿ ಕೆಲಸದ ಸಮಯವು ಸಂಪೂರ್ಣ ವ್ಯರ್ಥವಾಗುತ್ತದೆ, ಇದರಿಂದಾಗಿ ಸರ್ಕಾರಿ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸರ್ಕಾರದ ಆದೇಶದ ಅನುಸಾರ- ಇಂತಹ ಯಾವುದೇ ಖಾಸಗಿ ಕಾರ್ಯಕ್ರಮ , ಗೇಮಿಂಗ್ ಅಥವಾ ಇತರ ಮನೋರಂಜನೆ ಕಾರ್ಯಕ್ರಮ ಆಯೋಜಿಸಲು ನಿರ್ಬಂಧ ಹೇರಲಾಗಿದೆ.

ಸರ್ಕಾರಿ ಜಾಗ ಅಥವಾ ಸಮಯದ ದುರುಪಯೋಗ ಇದು ಸೇವಾ ನಿಯಮದ ಉಲ್ಲಂಘನೆ ಮಾಡಿದಂತಾಗಲಿದೆ. ಯಾವ ನೌಕರರು ಈ ಮಾರ್ಗದರ್ಶಕ ತತ್ವಗಳನ್ನು ಪಾಲನೆ ಮಾಡುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮ ಜಾರಿಗೊಳ್ಳಲಿದೆ. ಸರ್ಕಾರವು ಎಲ್ಲ ವಿಭಾಗದ ಪ್ರಮುಖರಿಗೆ ನಿಯಮಗಳನ್ನು ಕಠಿಣವಾಗಿ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ.