ಸುದ್ಧಿಕನ್ನಡ ವಾರ್ತೆ
ಪಣಜಿ(ವಾಸ್ಕೊ): ಈ ಮೊದಲು ಮಹಿಳೆಯರು ಕೇವಲ ನಿಗದಿತ ವಿಭಾಗದಲ್ಲಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದರು. ಭಾರತೀಯ ಸೈನ್ಯದಳದಲ್ಲಿ ಇದೀಗ ಮಹಿಳೆಯರು ಕೇವಲ ಸಹಾಯಕರಾಗಿ ಉಳಿದುಕೊಂಡಿಲ್ಲ. ಆದರೆ ಇಂದು ಚಿತ್ರ ಸಂಪೂರ್ಣ ಬದಲಾಗಿದೆ. ಅವರು ಕಠಿಣ ಹಾಗೂ ಸ್ಫರ್ಧಾತ್ಮಕವಾಗಿಯೂ ನೇತೃತ್ವ ವಹಿಸುತ್ತಿದ್ದಾರೆ. ಇದು ಮಹಿಳಾ ಅಧಿಕಾರಿಗಳು ಯುದ್ಧ ವಿಮಾನವನ್ನು ಕೂಡ ಹಾರಾಟ ಮಾಡುತ್ತಿದ್ದಾರೆ,ನಿರೀಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಎಟಿಸಿ ಎಂದು ಕೂಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ ಎಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ನುಡಿದರು.
ಗೋವಾದ ವಾಸ್ಕೊ ಶಿಪ್ ಯಾರ್ಡ ನಿರ್ಮಿಸಿರುವ “ಸಮುದ್ರ ಪ್ರತಾಪ್” ನೌಕೆಯನ್ನು ವಾಸ್ಕೊದಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ರವರು ಭಾರತೀಯ ರಕ್ಷಣಾ ಪಡೆ (ಐಸಿಜಿ) ಸೋಮವಾರ ಕಾರ್ಯಾರಂಭಗೊಳಿಸಿ ಅವರು ಮಾತನಾಡುತ್ತಿದ್ದರು.
ಮಹಿಳೆಯರಿಗೆ ಇದೀಗ ಹೋವರ್ ಕ್ರಾಪ್ಟ ಹಾರಿಸುವ ವಿಶೇಷ ತರಬೇತಿ ನೀಡಲಾಗುತ್ತಿದೆ. ಲಾಜೆಸ್ಟಿಕ್ ವಿಭಾಗದಲ್ಲಿ ಕೂಡ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ “ಜೆಂಡರ್ ಇನ್ ಕ್ಲ್ಯೂಜನ್” ಧೋರಣೆಯಿಂದಾಗಿ ಮಹಿಳೆಯರಿಗೆ ಈಗ ನೇರ ಫ್ರಂಟಲೈನ್ ಅಸೈನ್ ಮೆಂಟ್ ಲಭಿಸುತ್ತಿದೆ. ಇದು ಭಾರತದ ಲಷ್ಕರ್ ರಚನೆಯ ಮಹತ್ವದ ಲಕ್ಷಣವಾಗಿದೆ ಎಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ ಸಿಂಗ್ ನುಡಿದರು.
ಈ ಸಂದರ್ಭದಲ್ಲಿ ರಾಜನಾಥ ಸಿಂಗ್ ರವರು ಗೋವಾದಲ್ಲಿನ ಮಾಜಿ ಸೈನಿಕರಿಗೆ ಎಕ್ಸ ಸರ್ವೀಸ್ ಮೆನ್ ಕಾಂಟ್ರಿಬ್ಯೂಟರಿ ಹೆಲ್ತ ಸ್ಕೀಮ್ ಸೌಲಭ್ಯ ಲಭಿಸುವಂತೆ ಮಾಡುವುದಾಗಿ ಭರವಸೆ ನೀಡಿದರು.
ಮಾಜಿ ಸೈನಿಕರ ಆರೋಗ್ಯ ಸೇವೆಯಲ್ಲಿ ಯಾವುದೇ ತೊಂದರೆಯುಂಟಾಗಬಾರದು ಹಾಗೂ ಅವರ ಅನಾರೋಗ್ಯದ ಚಿಕಿತ್ಸೆಯ ಸಂದರ್ಭದಲ್ಲಿ ಕಷ್ಟಪಡುವಂತಾಗಬಾರದು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಿವೃತ್ತ ರಕ್ಷಣಾ ಕರ್ಮಚಾರಿಗಳು ಹಾಗೂ ಅವರನ್ನು ಅವಲಂಭಿಸಿ ಇರುವ ಕುಟುಂಬಸ್ಥರ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಕೇಂದ್ರ ರಕ್ಷಣಾ ಮಂತ್ರಿಗಳು ನುಡಿದರು. ರಕ್ಷಣಾ ಮಂತ್ರಿಗಳ ಈ ಭರವಸೆಯಿಂದಾಗಿ ಗೋವಾದಲ್ಲಿನ ಸಾವಿರಾರು ಮಾಜಿ ಸೈನಿಕರು ನಿಟ್ಟುಸಿರು ಬಿಡುವಂತಾಗಿದೆ.
ಸಮುದ್ರದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಯುಂಟಾದಾಗಲೆಲ್ಲಾ ಭಾರತೀಯ ಕರಾವಳಿ ಕಾವಲು ಪಡೆ ಮೊದಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಇಂದು ಭಾರತೀಯ ಕರಾವಳಿ ಕಾವಲು ಪಡೆಗಳನ್ನು ಗೌರವದಿಂದ ನೋಡಲಾಗುತ್ತದೆ. ಸುರಕ್ಷಿತ ಮತ್ತು ಸ್ವಚ್ಛ ಸಮುದ್ರವು ಸುರಕ್ಷಿತ ವ್ಯಾಪಾರ,ಸುರಕ್ಷಿತ ಜೀವನ ಮತ್ತು ಸುರಕ್ಷಿತ ಪರಿಸರವನ್ನು ಖಾತರಿಪಡಿಸುತ್ತದೆ. ಈ ರೀತಿಯಾಗಿ “ಸಮುದ್ರ ಪ್ರತಾಪ್” ನಂತರ ನೌಕೆಗಳು ಕಡಲ ಭಧ್ರತೆಯನ್ನು ಪರಿಣಾಮಕಾರಿಯಾಗಿ ಖಚಿತಪಡಿಸುತ್ತದೆ ಎಂದು ಕೇಂದ್ರ ರಕ್ಷಣಾ ಮಂತ್ರಿಗಳು ನುಡಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೇರಿದಂತೆ ನೌಕಾದಳದ ಹಿರೀಯ ಅಧಿಕಾರಿಗಳು ಉಪಸ್ಥಿತರಿದ್ದರು.
