ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಅಗ್ನಿ ಅವಗಡಗಳು ಮತ್ತೆ ಮತ್ತೆ ಸಂಭವಿಸುತ್ತಲೇ ಇದ್ದು ರಾಜ್ಯದ ಜನತೆ ಹಾಗೂ ಪ್ರವಾಸಿಗರನ್ನು ಬೆಚ್ಚಿ ಬೀಳಿಸಿದೆ. ಮಂಗಳವಾರ ಬೆಳಗಿನ ಜಾವ ಪಣಜಿ ಸಮೀಪದ ಪರ್ವರಿಯ ಘರಾನ್ ರೆಸ್ಟೊರೆಂಟ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 45 ಲಕ್ಷ ರೂ ಹಾನಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಅಗ್ನಿ ಅವಗಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಅವಗಡದ ಭೀಕರತೆ ಎಷ್ಟಿತ್ತೆಂದರೆ ರೆಸ್ಟೊರೆಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ನಿಮಿಷದಲ್ಲಿ ಇಡೀ ರೆಸ್ಟೊರೆಂಟ್ ಗೆ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿದೆ. ಈ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.
ಕಳೆದ ತಿಂಗಳು ಗೋವಾದ ಹಡಪಡೆಯಲ್ಲಿ ನೈಟ್ ಕ್ಲಬ್ ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಗಡದಲ್ಲಿ 25 ಜನ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ರಾಜ್ಯದ ಜನತೆಯ ಹಾಗೂ ಪ್ರವಾಸಿಗರ ಮನಸ್ಸಿಂದ ಮಾಸುವ ಮುನ್ನವೇ ಇಂತಹ ಅಗ್ನಿ ಅವಗಢಗಳು ಇನ್ನಷ್ಟು ಭಯ ಹುಟ್ಟಿಸುವಂತೆ ಮಾಡುತ್ತಿದೆ.
ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ದೇಶ ವಿದೇಶಗಳಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಭಧ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಮಂಗಳವಾರ ಬೆಳಿಗ್ಗೆ ರೆಸ್ಟೊರೆಂಟ್ ನಲ್ಲಿ ಭೀಕರ ಅಗ್ನಿ ಅವಗಡ ಸಂಭವಿಸಿದೆ. ಇಲ್ಲಿ ದಿನವಿಡಿ ಪ್ರವಾಸಿಗರ ಗರ್ದಿಯಿಂದ ಕೂಡಿರುತ್ತದೆ. ಬೆಳಗಿನ ಜಾವವಾಗಿರುವುದರಿಂದ ರೆಸ್ಟೊರೆಂಟ್ ನಲ್ಲಿ ಪ್ರವಾಸಿಗರು ಯಾರೂ ಇಲ್ಲದ ಕಾರಣ ದೊಡ್ಡ ಅವಗಢ ತಪ್ಪಿದಂತಾಗಿದೆ.
