ಸುದ್ದಿ ಕನ್ನಡ ವಾರ್ತೆ
ಕಲಬುರಗಿ: ಕಲಬುರಗಿಯ ಹಲವು ಕಚೇರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ದಿಢೀರ್ ಭೇಟಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ನ್ಯಾಯಾಧೀಶ ವಿಜಯಾನಂದ್ ನೇತೃತ್ವದ ತಂಡದಿಂದ ಮಹಾನಗರ ಪಾಲಿಕೆ , ಜಿಲ್ಲಾ ಪಂಚಾಯತಿ , ಸಬ್ ರಿಜಿಸ್ಟಾರ್ ಕಚೇರಿ ಸೇರಿ ಹಲವಡೆ ಧಿಡಿರ್ ಭೇಟಿ ನೀಡಲಾಯಿತು.
ಲೋಕಾಯುಕ್ತ ಅಧಿಕಾರಿಗಳ 15 ತಂಡದಿಂದ ಭೇಟಿ ಪರಿಶೀಲನೆ ನಡೆಸಲಾಯಿತು.
ಪಾಲಿಕೆ ಡಿ ಗ್ರೂಪ್ ನೌಕರರು ಯಾಕೆ ಸಮವಸ್ತ್ರ ಧರಿಸಿಲ್ಲ ಎಂದು ಪ್ರಶ್ನಿಸಿದರು, ಸಮವಸ್ತ್ರ ನೀಡಿಲ್ಲ ಅಂತಾ ಡಿ ಗ್ರೂಪ್ ನೌಕರರು ಹೇಳಿದ್ದರು, ಪಾಲಿಕೆಯ ಇ ಆಸ್ತಿ ವಿಭಾಗ , ಚುನಾವಣಾ ಕಚೇರಿಯಲ್ಲಿ ಪರಿಶೀಲನೆ ನಡೆಸಿತು.
ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಲೋಕಾಯುಕ್ತರು ಗರಂ ಆಗಿದ್ದರು.
